Library-logo-blue-outline.png
View-refresh.svg
Transclusion_Status_Detection_Tool

ವಿಷಯದ ಸುಖ ವಿಷವೆಂದರಿಯದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ವಿಷಯದ ಸುಖ ವಿಷವೆಂದರಿಯದ ಮರುಳೆ
ವಿಷಯಕ್ಕೆ ಅಂಗವಿಸದಿರಾ. ವಿಷಯದಿಂದ ಕೆಡನೆ ರಾವಣನು ವಿಷಯದಿಂದ ಕೆಡನೆ ದೇವೇಂದ್ರನು ? ವಿಷಯದಿಂದಾರು ಕೆಡರು ಮರುಳೆ ? ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ. ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ ನೀನಪ್ಪಿಹೆನೆಂದಡೆ ಒಣಗಿದ ಮರನಪ್ಪುವಂತೆ ಕಾಣಾ