ವೇದಶಾಸ್ತ್ರ ಪುರಾಣಾಗಮಂಗಳುದಯವಾಗದಂದು ದ್ವೆ ೈತಾದ್ವೆ ೈತವಿಲ್ಲದಂದು ಶ್ವೇತ ಪೀತ ಹರಿತ ಮಾಂಜಿಷ* ಕಪೋತ ಮಾಣಿಕ್ಯವರ್ಣಮೆಂಬ ಈ ಷಡುವರ್ಣಮುಖ್ಯವಾದ ಸಮಸ್ತವರ್ಣಂಗಳಿಲ್ಲದಂದು ನೀನು ವಾಚಾತೀತ ಮನಾತೀತ ವರ್ಣಾತೀತ ಭಾವಾತೀತ ಜ್ಞಾನಾತೀತನಾಗಿ ನೀನು ನಿಃಕಲನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.