ಶಬ್ದಸುಖಕ್ಕೆ ಮಚ್ಚಿ ಮಾತಿಂಗೆ ಮಾತನೆ ಕೊಟ್ಟು ಕೆಟ್ಟೆನಯ್ಯಾ ! ಅನುಭಾವದ ಅಕ್ಕವೆಯಾಗದೆ ಬಿಬ್ಬನೆ ಬಿರಿದೆನಯ್ಯಾ ! ಅಮೃತದ ಕೊಡನ ತುಂಬಿ ಒಡೆಯ ಹೊಯ್ದು ಅರಸಲುಂಟೇ ಸ್ವಾಮಿಭೃತ್ಯಸಂಬಂಧವೇ ಎನ್ನ ಭಕ್ತಿ ಪ್ರತ್ಯುತ್ತರ ನಾಯಕನರಕ ಕೂಡಲಸಂಗಮದೇವಾ. 299