ಶರಣೆಂದು ಕರ ಸಂತೋಷವ ಮಾಡಿ ಮುರಿದು ಮುಂಜೆರಗ ಗಂಟಿಕ್ಕಿ ನೆಲನ ಹೊಯಿದ ಕೈ ತಪ್ಪುವುದಲ್ಲದೆ ಆದಿ ಶರಣರ ನುಡಿ ತಪ್ಪುವುದೆ ಕೂಡಲಸಂಗಮದೇವರು ಸಾಕ್ಷಿಯಾಗಿ ಕಟ್ಟುವೆ ಗುಡಿಯನೆತ್ತುವೆನು ಧ್ವಜವ.