ಶಿವನ ಕೂಡಿರ್ಪ ಶರಣರ ಶೀಲವನೇನೆಂಬೆನಯ್ಯಾ ! ನೀರು ನೀರ ಕ್ಷೀರವು ಕ್ಷೀರ ಬೆರೆದಂತೆ. ತನುಮನಧನಂಗಳು ಗುರುಲಿಂಗಜಂಗಮದಲ್ಲಿ ಭರಿತವಾದ ಮಹಾಶರಣರ ನೀವೇ ಬಲ್ಲಿರಯ್ಯಾ ಅಖಂಡೇಶ್ವರಾ.