ಸರ್ಪದಷ್ಟವಾದರೆ ಗಾರುಡವುಂಟು ಪ್ರಸಾದದಷ್ಟವಾದರೆ ಗಾರುಡವಿಲ್ಲ. ಅಂಗದ ಕೈಯಲಾದುದ ಲಿಂಗಕ್ಕೆ ಕೊಡಲಿಲ್ಲ. ಲಿಂಗದ ಕೈಯಲಾದುದ ಅಂಗಕ್ಕೆ ಕೊಡಲಿಲ್ಲ. ಲಿಂಗದ ಒಡಲೆಂಬರು ಲಿಂಗಕ್ಕೆ ಒಡಲುಂಟೆ ? ಈ ಉಭಯಸಂಗ ಕೂಡಲಚೆನ್ನಸಂಗಾ ನಿಮ್ಮಲ್ಲಿ ವಿಚಾರಿಸೂದು ಮಹಾಘನ ತಾನು.