ವಿಷಯಕ್ಕೆ ಹೋಗು

ಸರ್ಪದಷ್ಟವಾದರೆ ಗಾರುಡವುಂಟು, ಪ್ರಸಾದದಷ್ಟವಾದರೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಸರ್ಪದಷ್ಟವಾದರೆ ಗಾರುಡವುಂಟು
ಪ್ರಸಾದದಷ್ಟವಾದರೆ ಗಾರುಡವಿಲ್ಲ. ಅಂಗದ ಕೈಯಲಾದುದ ಲಿಂಗಕ್ಕೆ ಕೊಡಲಿಲ್ಲ. ಲಿಂಗದ ಕೈಯಲಾದುದ ಅಂಗಕ್ಕೆ ಕೊಡಲಿಲ್ಲ. ಲಿಂಗದ ಒಡಲೆಂಬರು
ಲಿಂಗಕ್ಕೆ ಒಡಲುಂಟೆ ? ಈ ಉಭಯಸಂಗ ಕೂಡಲಚೆನ್ನಸಂಗಾ ನಿಮ್ಮಲ್ಲಿ ವಿಚಾರಿಸೂದು ಮಹಾಘನ ತಾನು.