ಹಲವು ಕೊಂಬಿಂಗೆ ಹಾಯಲುಬೇಡ ಬರುಕಾಯಕ್ಕೆ ನೀಡಲುಬೇಡ ಲೋಗರಿಗೆ ಕೊಟ್ಟು ಭ್ರಮಿತನಾಗಿರಬೇಡ. ಆಚಾರವೆಂಬುದು ಹಾವಸೆಗಲ್ಲು ಭಾವತಪ್ಪಿದ ಬಳಿಕ ಏಗೈದಡಾಗದು. ಅಂಜದಿರು ಅಳುಕದಿರು ಪರದೈವಕ್ಕೆರಗದಿರು ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ.