ಹಲವು ಪರಿಯ ಪುಷ್ಪದಲ್ಲಿ ಪರಿಮಳವನರಸುವರೆ ? ಪಿರಿದು ರಸದಾಳಿಯ ಕಟ್ಟಿನಲ್ಲಿ ಹಣ್ಣನರಸುವರೆ ? ಸುರಭಿಗೆ ತನು ಕತ್ತಲೆಯೆಂದು ಬೆಳಗನರಸುವರೆ ? ಪರಶಿವಮೂರ್ತಿ ಸಂಗನ ಶರಣರಲ್ಲಿ ಕ್ರಿಯೆ ನಿಃಕ್ರಿಯೆಯನರಸುವರೆ ? ಅವರಿದ್ದಿರವೆ ಮುಕ್ತಿ ಕೂಡಲಚೆನ್ನಸಂಗಮದೇವಾ.