ಹಲವು ಪರಿಯ ಪುಷ್ಪದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಲವು ಪರಿಯ ಪುಷ್ಪದಲ್ಲಿ ಪರಿಮಳವನರಸುವರೆ ? ಪಿರಿದು ರಸದಾಳಿಯ ಕಟ್ಟಿನಲ್ಲಿ ಹಣ್ಣನರಸುವರೆ ? ಸುರಭಿಗೆ ತನು ಕತ್ತಲೆಯೆಂದು ಬೆಳಗನರಸುವರೆ ? ಪರಶಿವಮೂರ್ತಿ ಸಂಗನ ಶರಣರಲ್ಲಿ ಕ್ರಿಯೆ ನಿಃಕ್ರಿಯೆಯನರಸುವರೆ ? ಅವರಿದ್ದಿರವೆ ಮುಕ್ತಿ
ಕೂಡಲಚೆನ್ನಸಂಗಮದೇವಾ.