ಹುಟ್ಟಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸಿಹೆನೆಂದಡೆ ತಪ್ಪದು ನೋಡಯ್ಯಾ. ಎನಗಿನ್ನೆಂತೊ ಎನಗಿನ್ನೆಂತೊ ಎನಗಿನ್ನೆಂತೆಂದೆನಬೇಡಯ್ನಾ. `ನಾ[s]ಭುಕ್ತಂ ಕ್ಷೀಯತೇ ಕರ್ಮ' ಎಂಬ ಶ್ರುತಿ ತಪ್ಪದು ಕೂಡಲಸಂಗಮದೇವಾ.