ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೨

ಬಿ. ಎಸ್. ವೆಂಕಟರಾಮ್

ಯನ್ನು ಛಿದ್ರಗೊಳಿಸುತ್ತಿದ್ದ ಒಂದು ಮಹಾಸ್ತ್ರ. ಆಗ ಮೂರ್ತಿ ಎದೆಗೆಟ್ಟು ಮೌನ ಮೂರ್ತಿಯಾಗಿ ಕೂಡುತ್ತಿದ್ದ. ಅವನ ವರ್ತನೆ ಅವನಿಗೆ ಹೇಸಿಗೆಯನ್ನುಂಟುಮಾಡುತ್ತಿದೆಯೆಂದು ಅದೊಂದರಿಂದಲೇ ರಾಜಿಯು ತಿಳಿದುಕೊಳ್ಳಬೇಕಾಗಿತ್ತು. ಅಂತಹ ಸ್ಥಿತಿಯಲ್ಲಂತೂ ಅವಳು ದುಃಖದಿಂದ ನೆಲಕ್ಕಿಳಿಯುತ್ತಿದ್ದಳು. ತತ್ಪಲವಾಗಿ ಇಮ್ಮಡಿ ಕನಿಕರ ಪಶ್ಚಾತ್ತಾಪದಿಂದ ಕೂಡಿ, ಹಳೆಯ ಮೂರ್ತಿಯನ್ನು ನೆನೆದು ಈ ಮೂರ್ತಿಯ ಸೇವೆಗೆ ಹುರುಪಿನಿಂದ ನಿಲ್ಲುತ್ತಿದ್ದಳು.
ಹೊರಗಿನವರಿಗೆ ಈ ವಿಚಿತ್ರ ಪ್ರೇಮ ಅರ್ಥವಾಗುತ್ತಿರಲಿಲ್ಲ. ನೆರೆಹೊರೆಯವರಲ್ಲಿ ಒಬ್ಬೊಬ್ಬರೂ ಒಂದೊಂದು ಬಗೆಯಾಗಿ ರಾಜಿಯ ಸುತ್ತ ಕತೆಗಳನ್ನು ಹೆಣೆಯುತ್ತಿದ್ದರು. ಬಾಯಿಂದ ಬಾಯಿಗೆ, ಕಿವಿ ಯಿಂದ ಕಿವಿಗೆ ಅವು-ವಿಶ್ವರೂಪಿಯ ವಿವಿಧ ಮುಖಗಳಂತೆ-ವಿಲಕ್ಷಣ ಸ್ವರೂಪ ತಾಳಿ ಹರಡುತ್ತ ಹೋಗಲಾರಂಭಿಸಿದ್ದವು.
ಕೆಲವರು, ರಾಜಿಯು ತನ್ನ ದೇಹಚಾಪಲ್ಯಗಳನ್ನು ಇತರೆಡೆ ಗಳಲ್ಲಿ ತೀರಿಸಿಕೊಳ್ಳುತ್ತಿರುವುದಕ್ಕೆ ಈ ಅಂಗವಿಹೀನ ಪತಿಸೇವೆ ಒಂದು ತೋರಿಕೆಯ ಆಟವೆಂದರು. ಮತ್ತೆ ಕೆಲವರು “ ಈ ಕುಂಟು, ಕುರುಡ ಗಂಡನಿಂದ ಈ ವಯ್ಯಾರಿಗೆಲ್ಲಿಯ ಸಂಸಾರ ಸುಖವಿದ್ದಿತಯ್ಯಾ? ಅವನು ಕರೆದಾಗ ಒಂದೆರಡು ಬಾರಿ ಉಪಚಾರದಾಟ ಆಡಿಬಿಟ್ಟರೆ ತೀರಿತು ; ಅವನ ಬೆನ್ನ ಹಿಂದೆ ಯಾವ ಆಟ, ಯಾರೊಡನೆ ಆಡಿದರೆ ತಾನೇ ಏನು? ಕೇಳುವರಾರು ??” ಎಂದು ಮುಂತಾಗಿ ಮನಸ್ವಿ ಟೀಕಿಸುತ್ತ ನಡೆದಿದ್ದರು. ಈ ಕತೆಗಳನ್ನು ಕೇಳಿದ್ದ ಕೆಲವು ಮಂದಿ ರಸಿಕ ತರುಣರು ರಾಜಿಯ ಮನೆಯ ಮುಂದೆ ಸುಳಿದಾಡುವುದು, ಶೀಟಿಹಾಕು ವುದು ಹೆಚ್ಚಾಯಿತು. ರಾಜಿಯು ಬಂಧು ಮಿತ್ರರ ಮನೆಗಳಿಗೆ ಅರಿಶಿನ-ಕುಂಕುಮಗಳಿಗೆ ಹೋಗಲು ರಸ್ತೆಗೆ ಕಾಲಿಟ್ಟರೆ ತೀರಿತು, ಅವಳು ಮತ್ತೆ ಮನೆಸೇರುವುದರೊಳಗಾಗಿ ಸಾವಿರಬಾರಿ ಸಾಯುತ್ತಿ ದ್ದಳು. ಅಷ್ಟು ಮಟ್ಟಿಗಿತ್ತು, ರಸ್ತೆಗಳಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹಿಂದೂಗಳ