ಪುಟ:Abhaya.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಳಗಿದ್ದ ಮೂವರು ಹುಡುಗಿಯರಲ್ಲಿ ಯಾರಾದರೊಬ್ಬಳು ಹೊರಬಂದ ಳೆಂದರೆ,ತರಗತಿಗೆ ತರಗತಿಯೇ ಆಕೆಯನ್ನು ನೋಡುತಿತ್ತು.

ಅಲ್ಲಿಗೇ ತರಗತಿ ನಿಲ್ಲಿಸಿ ಮನೆಗೆ ಹೊರಟು ಬಿಡಬಹುದೆಂದು

ರಾಜಮ್ಮನಿಗೆ ಸಂತೋಷವಾಯಿತು.ಆದರೆ ಆಕೆ ಅದನ್ನು ಹೊರಗೆ ತೋರಿಸಿಕೊಳ್ಳಲಿಲ್ಲ.ಮುಖ ಸಿಂಡರಿಸಿಕೊಂಡೇ ಅವರು ತಮ್ಮ ಪುಸ್ತಕಗಳನ್ನು ಎತ್ತಿಕೊಂಡರು.

"ಇವತ್ತಿಗೆ ಸಾಕು!"

ವಿದ್ಯುತ್ ಗುಂಡಿಯೊತ್ತಿದರೆ ಬೆಳಕು ಬೇಗನೆ ಬರುತಿತ್ತೋ ಇಲ್ಲವೋ,

ರಾಜಮ್ಮನ ಬಾಯಿಂದ ಆ ಎರಡು ವದಗಳು ಹೊರಬಿದ್ದೊಡನೆಯೇ ತರಗತಿ ಚೆದರಿತು!

ತುಂಗಮ್ಮ ಮಲಗಿದ್ದ ಕೊಠಡಿಯನ್ನು ಪ್ರವೇಶಿಸಿ ರಾಜಮ್ಮ ಎರಡು

ನಿಮಿಷ ಹಾಗೆಯೇ ನಿಂತು,ಸರಸಮ್ಮನನ್ನು ಉದ್ದೇಶಿಸಿ ಅಂದರು.

"ನಾನು ಬರ್ತೀನ್ರೀ"

"ಹೊರಡ್ತೀರಾ?"

"ಹುಂ..."

ಆದರೆ ಆಕೆ ಹೊರಡುವ ಲಕ್ಷಣ ಕಾಣಿಸಲಿಲ್ಲ ಏನಾದರೊಂದು

ಹೇಳದೆ ಆಕೆ ಹೊರಡುವಳೆಂದು ಸರಸಮ್ಮ ಭಾವಿಸಿಯೂ ಇರಲಿಲ್ಲ.

"ಡಾಕ್ಟರನ್ನು ಕರೆಸೋದು ಬೇಡ ಅಂತೀರಾ?"

"ಕರೆಸೋಣ,ಆಮೇಲೆ."

"ಆಸ್ಪತ್ರೆಗೆ-?"

"ಆಕೆಗೆ,ಇಲ್ಲಿಯೇ ಇರೋದು ಇಷ್ಟವಂತೆ.

"ನಿಜ ಸಂಗತಿಯೆಂದರೆ,ಆಸ್ಪತ್ರೆಗೆ ಹೋಗಲು ತುಂಗಮ್ಮನಿಗೆ

ಇಷ್ಟವಿರಲಿಲ್ಲ.ಅಲ್ಲಿ ಯಾರಾದರೂ ತನ್ನನ್ನು ಗುರುತಿಸಬಹುದೆಂಬ ಭಯ ಆಕೆಯನ್ನು ಕಾಡುತಿತ್ತು.

"ಸರಿ ಹಾಗಾದರೆ."

ಇನ್ನೂ ಇಲ್ಲೇ ನಿಂತಿದಾಳಲ್ಲಾ-ಎಂದು ಬೇಸರಗೊಂಡವರಂತೆ ಆ