" ಏನೂ ಬೇಡಿ. "
" ಕುಡಿಯೋಕೆ ನೀರು ಕಳಿಸ್ತೀನಿ"
" ಹೌದು, ನೀರುಬೇಕು "
" ಈಗ ನನ್ಜತೇಲಿ ಬನ್ನಿ ಮಿಸ್ ಪ್ರಭಾ " ಪ್ರಭಾ ಎದ್ದಳು ತುಂಗಮ್ಮ ಹಿಂದೆಯೇ ಉಳಿದಳು ಹೊರಹೋಗುತ್ತ ಸರಸಮ್ಮನೆಂದರು.
" ಈಗ ಅಸಾಧ್ಯ ಸೆಖೆ, ಇನ್ನು ನಾಲ್ಕೈದು ದಿವಸ ಆಮೇಲೆ ಮೇಲೆ ಷುರುವಾಗ್ಬಿಡುತ್ತೆ. ಆಗ ತಣ್ಣಗಿತ್ತದೆ”
ಪ್ರಭಾ ಅಭಯಧಾಮಕ್ಕೆ ಬಂದ ಒಂದು ವಾರದಲ್ಲಿಯೇ ಜೋರೋ ಎಂದು ಮುಂಗಾರು ಮಳೆ ಶುರುವಾಯಿತು ಜಗಲಿಯಲ್ಲಿ ಮಲಗಲಾರದೆ ಹುಡುಗಿಯರೆಲ್ಲ ಹಜಾರವನ್ನೂ ಸೇರಿದರು.
ಒಂದು ರಾತ್ರೆ ಹಾಗೆ ಚೆನಾಗಿ ಮಳೆ ಬಂದಮೇಲೆ, ಬೆಳಗು ಮುಂಜಾನೆ ಜಲಜ ತುಂಗಮ್ಮನನ್ನು ಎಬ್ಬಿಸಿ ಹಜಾರದ ಕಿಟಿಕಿಯ ಬಳಿ ನಿಂತು ಹೊರಗೆ ಬೊಟ್ಟ ಮಾಡಿದಳು: " ನೋಡಿದಾ ಅಕ್ಕ? ಆವತ್ತು ಹೇಳಿದ್ದಿಲ್ಲಾ ನಾನು? ಸಮುದ್ರದ ಹಾಗೇ ಇಲ್ಲ ?" ಹೌದೆಂದು ತುಂಗಮ್ಮ ತಲೆಯಡಿಸಿದಳು ಭಾಗದಲ್ಲಿ ಮಾತ್ರ ಭೂಮಿಗೆ ಅಂಟಿಕೊಂಡಿದ್ದ ಅರ್ಧದ್ವೀಪವಾಗಿತ್ತು. ಮೂಲೆಗಳಿಂದಲೂ ವಟಗುಟ್ಟತಿದ್ದುವು ಕಪ್ಪೆಗಳು " ನೀನು ಚಿಕ್ಕವಳಿದಾಗ ಮಳೆಗಾಲದಲ್ಲಿ ಏನೇನು ಮಾಡ್ತಿದ್ದೆ ತುಂಗಕ್ಕ ?"
"ತಲೆಮೇಲೆ ಕೈ ಇಟ್ಟೊಂಡು ಲಂಗ ಎತ್ತಿಕೊಂಡು ಕುಣೀತಿದ್ದೆ. ಕಾಗ್ಧದ ದೋಣೀನ ಚರಂಡಿ ನೀಗ್ನಲ್ಲಿ ಬಿಟ್ಟ ಅದಗ್ಧತೇಲೆ ಓಡ್ರಿದ್ದೆ.” ನಾನೂ ಹಂಗೇ ಮಡ್ಬೇಕೂಂತ ಓಡಾಡ್ತಿದ್ನಮ್ಮ, ಆದರೆ ಆದೊಡ್ಡ.