ಅರಸಿ ತೊಳಲಿದಡಿಲ್ಲ ಹರಸಿ ಬಳಲಿದಡಿಲ್ಲ ಬಯಸಿ ಹೊಕ್ಕಡಿಲ್ಲ ತಪಸ್ಸು ಮಾಡಿದಡಿಲ್ಲ. ಅದು ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು. ಶಿವನೊಲಿದಲ್ಲದೆ ಕೈಗೂಡದು. ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು.