ವಿಷಯಕ್ಕೆ ಹೋಗು

ಅರಸಿ ತೊಳಲಿದಡಿಲ್ಲ, ಹರಸಿ

ವಿಕಿಸೋರ್ಸ್ದಿಂದ
ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya

ಅರಸಿ ತೊಳಲಿದಡಿಲ್ಲ
ಹರಸಿ ಬಳಲಿದಡಿಲ್ಲ
ಬಯಸಿ ಹೊಕ್ಕಡಿಲ್ಲ
ತಪಸ್ಸು ಮಾಡಿದಡಿಲ್ಲ. ಅದು ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು. ಶಿವನೊಲಿದಲ್ಲದೆ ಕೈಗೂಡದು. ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು.