ಮೂರ್ತಿಯಿಲ್ಲದ ಬಯಲು ಅಮೂರ್ತಿಯಿಲ್ಲದ ಬಯಲು ಸಗುಣವಿಲ್ಲದ ಬಯಲು ನಿರ್ಗುಣವಿಲ್ಲದ ಬಯಲು ಅಖಂಡೇಶ್ವರನೆಂಬ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.