ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೮ ನಡೆದದ್ದೇ ದಾರಿ

ಹಿತ್ತಾಳೆಯ ಝಮುಕಿತೊಟ್ಟು, ಕೈ ತುಂಬಾ ಬಣ್ಣ ಬಣ್ಣದ ಬಲೇ ಹಾಕಿಕೊಂಡು, ಹೊಸ ಮದುಮಗಳಂತೆ.

       ಶಶಿಗೆನಿಸಿತು, ಈಕೆ ಮನೆಯಲ್ಲಿ ಏನಾದರೂ ಬಿಟ್ಟು ಹೋಗಿರಬಹುದು, ಅದನ್ನು ಒಯ್ಯಲೆಂದು ಎರೆಡು ದಿನಗಳ ಮಟ್ಟಿಗೆ ಬಂದಿರಬೇಕು. ಅಥವಾ.... ಬೇರೆ ಮದುವೆಯಾಗಿರಬಹುದೇ? ಛೆ, ಇರಲಾರದು.ಆರೇಳು ಮಕ್ಕಳ ತಾಯಿಯನ್ನು ಯಾರು ಲಗ್ನವಾದಾರು? ಅವಲೇನು ಗಂಡಸಲ್ಲ ವಲ್ಲ....
       "ಬಾ ಬಾ ರೋಷನ್, ಇದೇನು, ಹೋದಾಕಿ ಎಷ್ಟು ದಿನ ಗ್ಯಾಪ್ ಗಡದ್ ಆಗಿಬಿಟ್ಟಿದಿ. ಈಗ ಒಮ್ಮೆ ಜಿಲ್ಲೆ ಪ್ರತ್ಯಕ್ಷ ಆಗೀಯೆಲ್ಲ, ಏನು ಸುದ್ದಿ?" ಒಳಬಂದು ನೆಲೆದ ಮೇಲೆ ಕೂಡುತ್ತ ರೋಷನ್ ಬಿ ಖುಷಿಯಿಂದ ಉತ್ತರಿಸಿದಳು, "ನ ತಿರುಗಿ ಬಂದು ಬಿಟ್ಟಿಂರಿ ಡಾಕ್ಟರ್ ಬಾಯಿ".
       "ಹೌದಾ ? ಗುಡ್. ಅಧ್ಯನಗ ಬಂದಿ? ಅಷ್ಟು ಗಟ್ಟಿ ಮನಸ್ಸು ಮಾಡಿ ಹೋದಾಕಿ ? ನಿನ್ನ ಗಂಡ ಕರೀಲಿಕ್ಕೆ ಬಂದಿದ್ನೋ ಏನೋ ?"
       "ಇಲ್ರಿ ಬಾಯಿ, ಆದರೆ ನಾ ಇಲ್ಲಿದೆ ಬಾಲ ತ್ರಾಸು ಆಗೇತಿ, ಅದಕ್ಕ ಲಗೂನ ತಿರಿಗಿ ಬಾ ಅಂತ ಕಾರ್ಡು ಬರದಿದ್ದೀನ್ರಿ. ಪೂರಾ ಕಾರ್ಡು ನನ್ನ ಹೆಸರಿಗೇನೇ ಬರದಿದ್ದೀನ್ರಿ." ಗಂಡ ತನ್ನ ಹೆಸರಿಗೆ ಪಾತ್ರ ಬರೆದದ್ದು ರೋಷನ್ ಬೇಗೆ ದೊಡ್ಡ ಥ್ರಿಲ್ ಆಗಿತ್ತು. ನೀರಿಗೆ ಬಿದ್ದ ಅವಳ ಸೊರಗಿದ ಮುಖದಲ್ಲಿ ಆ ಮಾತು ಹೇಳುವಾಗ ಕೆಂಪು ಮೂಡಿತು. ಅನೇಕ ವರ್ಷ ಆತನ ಕೈಯಲ್ಲಿ ಪಾಬಾಳದ ಪಾಡು ಪಟ್ಟು, ರೋಸಿ ಹೋಗಿ ಕೊನೆಯ ದಾರಿಯೆಂದು ದೂರ ಹೋಗಿದ್ದ ಆಕೆಯ ಮನಸ್ಸನ್ನು ಹರಕು ಮುರಕು ಬಾಷೆಯಲ್ಲಿ ಗಂಡ ಗೀಚಿದ್ದ ನಾಲ್ಕು ಸಾಲುಗಳ ಪೋಸ್ಟ್ ಕಾರ್ಡ್ ಪೂರಾ ಬದಲಿಸಿತ್ತು. ಶಶಿಗೆ ನಗು ಬಂತು: 
       "ಅಲ್ಲ ರೋಷನ್, ನೀಬಂಡಿ ಕರೆ, ಈಗ ಮಟ್ಟ ನಿನ್ನ ಗಂಡ ಮೊದ್ಲಿನಹಂಗ ತ್ರಾಸು ಕೂಡ್ಲಿಕ್ಕೆ ಸುರು ಮಾಡಿದ್ರ ಏನ್ಮಾಡ್ತಿ ?"  
       ವಿಶ್ವಾಸದ ಧುವಾಣಿಯಲ್ಲಿ ಉತ್ತೈಸಿದಳು ರೋಷನ್,"ನಾ ಅಷ್ಟು ದಡ್ಡಿ ಏಳ್ರಿ ಬಾಯಿ. ಬರೋವಾಗ ನಮ್ಮ ಅಣ್ಣನ್ನ, ಇನೊಬ್ಬರು ನಮ್ಮ ನಿಕ್ಕ ಮಾಡಿಸಿದ ಹಿರಿಯರನ್ನು ಕರಕೊಂಡು ಬಂದಿದೆ. ಇಲ್ಲಿನ ನಾಲ್ಕು ಮಂದಿ ಕೂಡಿಸಿದ್ದೆ. ಎಲ್ಲರ ಮುಂದ ವಚನ ಕೊಟ್ಟಾನ."
       "ಏನಂತ? "
       "ಇನ್ನಮ್ಯಾಲ ವಾರದಾಗ ಒಂದು ದಿನ ತಪ್ಪದೆ ಮುನಿಗೆ ಬರ್ತೀನಿ ಅಂತ; ಮಟ್ಟ ಹೆಂಡ್ತಿ ಗಳಿಸಿದ ರೊಕ್ಕ ಕೈಯಿಂದ ಮುಟ್ಟೋದಿಲ್ಲ ಅಂತ; ತವರು