ಕಿರುಕಾದಂಬರಿಗಳು/ಗಂಡಸರು ನನ್ನ ಬರಬವಣಿಗೆ,ನನ್ನ ಆದರ್ಶ,ನನ್ನ ತತ್ರ್ಜಗಳು,ನನ್ನ ಇಡೀ ಜೀವನ-ಎಲ್ಲದರ ಕೇಂದ್ರ ಬಿಂದು ನೀವು.ನೀವಿಲ್ಲದೆ ಈ ಯಾವುದಕ್ಕೂ ಏನೂ ಅರ್ಥವಿಲ್ಲ.ಹೇಳಿ-ನೀವು ನನಗೆ ಬೆಳಕಾಗುತ್ತೀರಾ?ಗಾಳಿಯಾಗುತ್ತೀರಾ?ಅರ್ಥವಗುತ್ತೀರಾ? -ನೀವು ಇಲ್ಲಾವೆಂದರೆ ನಾನು ಮತ್ತೆ ಕಾಡು ಸುತ್ತುವೆ,ಗುಡ್ಡ ಏರುವೆ,ಹೊಳೆ ಈಜುವೆ,ಬೆಂಕಿಯಲ್ಲಿ ಹಾರುವೆ,ಬೇಯುವೆ,ಉಗಿಯಾಗುವೆ,ನೇರಾಗುವೆ,ಹರಿಯುವೆ,ಕತ್ತಲಲ್ಲಿ ಕಣ್ಣುಕಣ್ಣು ಬಿಡುವೆ,ಹೀಗೇ....ಸಾಗುವೆ. -ನನಗೆ ಗೊತ್ತಿದೆ,ನಿಮ್ಮ ಎದೆಯಲ್ಲಿ ಯಾವುದೋ ವೇದನೆಯ ಹಿಮಾಲಯ ಆಡಗಿದೆ.ನಿಮ್ಮ ಕಣ್ಣುಗಳಲ್ಲಿ ಆ ವೇದನೆ ಸದಾ ಮಿನುಗುತ್ತದೆ.ನಿಮ್ಮ ದುಃಖವನ್ನೆಲ್ಲ ನನಗೆ ಕೊಡಿ.ಎರಡೂ ಕೈ ನೀಡಿ ಅದನ್ನು ಅಪ್ಪಿಕೊಳ್ಳುವೆ. ಪ್ರತಿಯಾಗಿ ನನಗೆ ನಿಮ್ಮದೊಂದು ಕಿರುನೆಗೆ ಸಾಕು.ನೆಮ್ಮದೊಂದು ಕಣ್ಣು ಮಿಂಚು ಸಾಕು.ನಾನು ರಾಕ್ಶಾಸನಲ್ಲ.ನನಗೆ ಹೂವನ್ನು ಹೂಸಕಿ ಹಾಕುವ ಬಯಕೆಯಿಲ್ಲ.ನಾನು ಬಾಯಾರಿದವನು.ನನಗೆ ನಿಮ್ಮ ಒಲವಿನಮ್ರತ ಮಾತ್ರ ಸಾಕು. -ನನಗೆನಿಸುತ್ತದೆ,ನಾನು ಇಷ್ಟು ದಿನ ನಿಮ್ಮನ್ನೇ ಹುದಡುಕುತ್ತಿದ್ದೆ.ನಿಮ್ಮನ್ನು ಕಂಡ ಕಣ ನನ್ನ ಶೋಧನೆ ಮುಗಿಯಿತೆಂದು ನನಗೆ ಗೊತ್ತಾಗಿ ಹೋಯಿತು.ನಾನು ಇಷ್ಟು ವರ್ಶಾ ತ್ರಸ್ತನಾಗಿ,ಹುಚ್ಚನಾಗಿ,ಹಪಾಪಿಯಾಗಿ ಆರಸುತ್ತಲಿದ್ದ ಬೆಳಕು ನಿಮ್ಮ ಕಣ್ಣುಗಳಲ್ಲಿ ನನಗೆ ಕಾಣಿಸಿತು....." -ನೋಟ್ ಬುಕ್ ನಲ್ಲಿರಿಸಿ ಕೊಟ್ಟಿದ್ದ ದೊಡ್ಡದಾದ ಆ ನಿವೇದನಾಪತ್ರವನ್ನು ಓದುತ್ತಿದ್ದಂತೆ ಶಾಂತಿಗೆ ಪ್ರಾಮಾಣಿಕವಾಗಿ ಅನಿಸಿತು.ಈ ಪ್ರೊ.ಮಟ್ದ ಕಾದಂಬರಿ ಬಿಟ್ಟು ಕವಿತೆ ಬರೆದಿದ್ದರೆ ಎಷ್ಟು ಚೆನ್ನಿತ್ತು.... ಎಷ್ಟು ಚೆಂದದ ಪತ್ರ! ಎಷ್ಟು ಪ್ರಾಮಾಣಿಕವಾಗಿ,ಗಂಭೀರವಾಗಿ,ಮುಗ್ಧವಾಗಿ,ಸುಂದರವಾಗಿ ರೋಮ್ಯಾಂಟಿಕ್ ಆಗಿ,ಆದರೂ ಮನಸ್ಸು ತಟ್ಟುವಂತೆ....
***
"ಶಾಂತಿ,ನನ್ನ ಹಾಗೆಯೇ ನೀನೂ ಬೆಳಕನ್ನು ಹುಡುಕುತ್ತಿದ್ದೆಯೆಂದು,ಆದು ನಿನಗೆ ನನ್ನ ಕಣ್ಣುಗಳಲ್ಲಿ ಕಾಣಿಸಿತೆಂದು,ತಿಳಿದು ನನಗೆ ಏನೆನಿಸಿತು ಗೊತ್ತೇ? ನಿನ್ನನ್ನು ಎತ್ತಿಕೊಂಡು ಬೀದಿಗಳ ತುಂಬಾ ಕುಣಿದಾಡಬೇಕು ಅನಿಸಿತು.ನಾನು ನಿಜವಾಗಿಐಯೂ ಹಾಗೆ ಮಾಡುವವನೇ.ನನಗೆ ಯಾರದೂ ಅಂಜಿಕೆಯಿಲ್ಲ. -ನಿನ್ನಾಣೆ ಶಾಂತಿ, ನನಗೆ ನಿನ್ನ ಕೆರಿಯರ್ ನ್ನಾಗಲೀ ಕಲಂಕಿತಗೊಳಿಸುವ ಮನಸ್ಸಿಲ್ಲ.ನೀನು ಇದೇ ಅರಳುತ್ತಿರುವ ಹೂವಿನ ಹಾಗೆ.ನಾನು ನಿನ್ನನ್ನು ಪ್ರೀತಿಸುತ್ತದ್ದೇನೆ.ಇದರರ್ಥ ನಾನು ನಿನ್ನನ್ನು possess