ಆಂದ - "ಈ ಹೆಂಗಸಿನ ಮ್ಯಾಲ ನಾವು ಮೊದ್ಲಿ ನಿಂದ ಒಂದು ಕಣ್ಣು ಇಡ್ಬೇಕಾಗುತ್ತದೆ . ಆಕಿನ್ನ ನೋಡಿದರ ಕೆಲಸದಾಕಿ ಆಂತ ಯಾರಂತಾರ ? ಆಕೀ ಸೀರೇನು ,ಕುಬಸೇನು ,ಪೌಡರೇನು ,ಡೌಲೇನು! ನಮ್ಮಪ್ಪನಂಥಾ ಮುಳ್ಳ ಗಂಡಸಿನ್ನ ಬಲ್ಯಾಗ ಹಾಕ್ಕೊಳ್ಳೋದು ಆಕೀಗೆ ಆಗದೀ ಸಸಾರ ಸಾಧಿಸಿರಬೇಕು".
"ಇಷ್ಟ ಧೊಡ್ದ -ಧೊಡ್ದ ಗಂಡಸ ಮಕ್ಕಳು ಸೊಸೆಂದಿರು ,ಹೆಣ್ಮಕ್ಕಳು ,ಅಳಿಯಂದಿರು,ಇಷ್ಟ ಮೊಮ್ಮಕ್ಕಳು- ಎಲ್ಲಾ ಇದ್ದಾಗ ,ಅರವತ್ತ ವರ್ಷದ ಶಾಂತೀ ಸುದ್ಧಾ ಮಾಡಿಸಿಕೊಂಡು ನಾಲ್ಕು ವರ್ಷ ಆಗಿ ಹೋದ ಮ್ಯಾಲ ,ಈಗ ಮಾವನವರಿಗೆ ಹಿಂಗ ಹರೇ ತಿರಿಗೀತು ಅಂತ ಹ್ಯಾಂಗ ಗೊತ್ತಾಗ್ಬೇಕ್ರೇವಾ ನಮಗ ?"- ಸುರೇಶನ ಹೆಂಡತಿ ಶೀಲಾಳ ಧ್ವನಿಯಲ್ಲಿ ವಿಪರೀತ ಕಾಳಜಿ.
"ಒಟ್ಟ ಎಲ್ಲಾ ಮುರಾಬಟ್ಟಿ ಆಗೂಹಾಂಗೆ ಕಾಣ್ಸ್ತದ . ನಮ್ಮಆವ್ವಾ ಎಂಥಾ ದೇವತಾಸ್ತ್ರೀ ! ಲಕ್ಷ್ಮೀದೇವಿ ಇದ್ಧಾಂಗ ಇದ್ಳು . ಆಕೀ ಆತ್ಮಕ್ಕ ಎಷ್ಟ ತಳಮಳ ಆಗ್ತಿರಬೇಕು ಈಗ." -ಸರಲಾಗೆ ಆಳು ತಡೆಯಲು ಆಗುವುದೇ ಇಲ್ಲ.
ಸತೀಶ ಮನೆಯ ಹಿರಿಯ ಮಗನ ಜವಾಬ್ದಾರಿಯುತವಾದ ಗದರಿಸುವ ಧ್ವನಿಯಲ್ಲಿ ಅಂದ -"ಶ್ ಸುಮ್ನಿರು ಸರಲಾ, ಅಳ್ಲಿಕ್ಕೆeನಾತು ಈಗ? ನಮಗೇನು ದುಃಖ ಆಗಿಲ್ಲೇನು ? ಅಂಥಾ ಸತ್ತೀಸಾವಿತ್ರಿ ನಮ್ಮವ್ವನ ಜಾಗಾದಾಗ ಈಗ ಹತ್ತ ವರ್ಷದ ಮ್ಯಾಲ ಅಡಿಗಿ ಸರಸವ್ವನ್ನ ನೆನಿಸಿದರ ನಮಗೂ ಹೊಟ್ಟಿ ಉರೀತದ. ಕಮಲಕ್ಕ ಬಂದಾಳಲಾ ಈಗ , ಆಕಿ ಏನರೆ ಮಾಡಿ ಎಲ್ಲಾ ಬರೋಬ್ಬರಿ ಮಾಡ್ತಾಳ ಸುಮ್ನಿರಿ ನೀವೆಲ್ಲಾ . ಅಪ್ಪಾ ಆಕೀ ಮಾತು ಎಂದೂ ತಗದು ಹಾಕವರೆಲ್ಲಾ" .
"ಪಾಪ , ಕಮಲಾವೈನ್ಸ್ ದಣದ ಬಂದಾರ. ಊಟಾನ ನೆಟ್ಟಗ ಮಾಡ್ಲಿಲ್ಲ . ಮಧ್ಯಾಹ್ನ ಒಂದಿಷ್ಟ ಸಿರಾ ಮಡೋನಾ ರಮಕ್ಕ?"-ಸುಷ್ಮಾನ ಕಳಕಳಿ .
"ಹಾಜ್ಞೆ ಹಾಜ್ಞೆ . ಅವ್ರು ಬರ್ರ್ತಾರಂತ ಬಟಾಟಿಈ ಚೂಡಾನು ಮಾಡಿಟ್ಟೆ ನಾ ನಿನ್ನೆ -ಕಮಲಾವೈನ್ಸ್ಗೆ ಭಾಳ ಸೇರತ್ತದ ಅಂತ ".-ರಮಾನ ಮುಂಧೋರಣೆ .
"ನನಗನಸ್ತದ ಸತೀಶಣ್ಣ ,ನಾವೇನ ಇನ್ನ ಕಾಳಜೀ ಮಾಡೋ ಜರೂರಿಲ್ಲ .ಮೊನ್ನೆ ನಾವೆಲ್ಲಾ ಕೂಡಿ ಅಪ್ಪನ್ನ oppose ಮಾಡಿದಾಗ ಅಪ್ಪ ಹೇಳೇ ಬಿಟ್ಟರಲ್ಲ -'ಕಮಲಾ ಬರಲ್ಲಿ ,ಆಕಿ ಏನಂತಾಳೋ ಹಾಂಗ ನಡೀಲಿಕ್ಕೆ ತಯಾರಿದ್ದೀನಿ ನಾನು .ನನಗು ಮಕ್ಕಳ ಮನಸ್ಸು ನೋಯಿಸೋ ಮನಸಿಲ್ಲ'-ಅಂತ ?ಕಮಲಕ್ಕ ಬಂದದ್ದು ದೊಡ್ಡ ಭಾರ ಇಳಧಂಗಾತು ನಮಗ .ಅಲ್ಲ ?"-ಸುರೇಶ . "ಹಾಂಗೆಲ್ಲಾ ನೀ ಆಶಾ ಹಿಡಿಬ್ಯಾಡ .ನಮ್ಮಪ್ಪಾ ಭಾಳ diplomatic ಇದ್ದಾನೆ ಇಷ್ಟಾ ವರ್ಷ ರಾಜಕೀಯದಾಗ ,ಬೈಜ್ಜಿಸ್ನ್ಯಾಗ ಪಳಗಿದ ಆಸಾಮಿ ಅಷ್ಟ