ವಿಷಯಕ್ಕೆ ಹೋಗು

ಪುಟ:Vimoochane.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
...'ಮಂಗಳವಾರ

ಜನ ಯಾಕೆ ಬರೆಯುತ್ತಾರೆ? ಈ ಪ್ರಪಂಚದಲ್ಲಿ ಪುಸ್ತಕ ಗಳನ್ನು ಯಾಕೆ ಅಚ್ಚು ಹಾಕಿಸುತ್ತಾರೆ? ತಾವು ಬರೆದುದು ಹತ್ತು
ಜನರಿಗೆ ತಿಳಿಯಲಿ ಎಂದಲ್ಲವೆ? ಸಹಸ್ರ ಜನ ಓದಲಿ ಎಂದಲ್ಲವೆ?
ನಾನು ಬರೆಹಗಾರನಲ್ಲ. ಸಾಹಿತ್ಯ ಸೃಷ್ಟಿ ನನ್ನ ಉದ್ದೇಶವಲ್ಲ.
ನನು ಹಿಂದೆಂದೂ ಬರೆದುದಿಲ್ಲ. ಆದರು ಲೇಖಣಿ ಎತ್ತಿ
ಬರೆಯತೊಡಗಿದ್ದೇನೆ. ಹೇಳಬೇಕಾದ ಕೆಲವು ವಿಷಯಗಳಿವೆ ನನ್ನಲ್ಲಿ.
ಆವುಗಳನ್ನು ನಾನು ಹೇಳಲೇಬೇಕು. ಮೂವತ್ತೆಂಟು ವರ್ಷಗಳ
ಕಾಲ ನನಗೆ ನೀರು ಗಾಳಿ ಕೊಟ್ಟ ಈ ಲೋಕವನ್ನು ಬಿಟ್ಟು ಹೊರ
ಡುವುದಕ್ಕೆ ಮುಂಚೆ, ಆ ವಿಷಯಗಳನ್ನು ನಾನು ಬರೆದಿಡಲೇಬೇಕು.
ನನ್ನ ಈ ಒರೆವಣಿಗೆ ಸಾಹಿತ್ಯವಾಗದೇ ಹೋಗಬಹುದು. ಆದರೂ
ನಾನು ಬರೆಯಬೇಕು.
ಈ ದಿನ ಮಂಗಳವಾರ. ಶುಭ ಕೆಲಸಕ್ಕೆ ಇದು ಯೋಗ್ಯ ದಿನ
ಆಲ್ಲವಂತೆ. ಇರಬಹುದು.ಜೀವಮಾನದಲ್ಲಿ ಒಂದು ಸಾರಿಯೂ
ಘಳಿಗೆ ಮುಹೂರ್ತ ನೋಡದ ನಾನು ಈಗ ಶುಭ ಆಶುಭಗಳ
ಯೋಚನೆ ಮಾಡಲೆ? ಹೆಸರು-ಮಂಗಳವಾರ. ಮಂಗಳ ಎಂದರೆ
ಒಳಿತು ಎಂದು ಕೇಳಿದ್ದೇನೆ. ಅಷ್ಟು ಸಾಕು!
ಕರುಳು ಬಿರಿದು ಬರುತ್ತಿದೆ. ಯಾವುದೂ ಸೈತಾನ ಹೊಟ್ಟೆಯ
ಒಳಹೊಕ್ಕು ಒರಟು ಬೆರಳುಗಳಿಂದ ಕೈಗೆ ಸಿಕ್ಕಿದುದೆಲ್ಲವನ್ನೂ ಹಿಚುಕು
ತ್ತಿದ್ದಾನೆ.ನನ್ನ ದೀಹ ಸೊರಗಿದೆ. ಎತ್ತರದ ದೃಢಕಾಯನೆಂದು
ಪೋಲೀಸರ ದಖಲೆಯಲ್ಲಿ ನನ್ನ ಬಗ್ಗೆ ಬರೆದಿದ್ದಾರೆ ಎಂಬುದು ನಿಜ.
ಆದರೆ ಅದು ಹಳೆಯ ದಾಖಲೆ. ನಾನೀಗ ಎತ್ತರವಿದ್ದರೂ ಸ್ವಲ್ಪ

೧೭