ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೦
ಕರ್ನಾಟಕ ಗತವೈಭವ

तत्सूनुरानतनृपो नृपतुंगदेव:|
 सो भूत्स्वसैन्यभरभंगुरिताहि राजः ||
यो मान्यखेटममरेंद्रपुरोऽपहासि ।
 गीर्वाणगर्वमिव खर्वयितुं व्यधत्त ॥

- ವರ್ಧಾ ಮತ್ತು ಕರ್ಹಾಡ ತಾಮ್ರ ಶಾಸನ

"ತನ್ನ ಮಹಾಸೈನ್ಯದಿಂದ ಅಹಿರಾಜನನ್ನು ಹಣ್ಣಿಗೆ ತಂದಂಥ ಮತ್ತು ನೃಪತಿಗಳಿಂದ ನಮಿಸಲ್ಪಡುವಂಥ ಅವನ ಮಗ ನಾದ ನೃಪತುಂಗದೇವನು- ದೇವತೆಗಳ ಗರ್ವವನ್ನು ಖಂಡಿಸುವ ಉದ್ದೇಶದಿಂದಲೋ ಏನೋ, ತನ್ನ ರಾಜಧಾನಿಯಾದ ಮಾನ್ಯಖೇಟ (ಮಳಖೇಡ) ಪುರವನ್ನು ದೇವತೆಗಳ ಅಮರಾವತಿಯ ಪಟ್ಟಣವನ್ನು ಕೂಡ ನಾಚಿಸುವಂತೆ ಬೆಳಿಸಿದನು” ಎಂಬುದಾಗಿ ಇದರಲ್ಲಿ ವರ್ಣಿಸಿರುತ್ತದೆ.
ಸಾಲೋಟಗಿಯ ಶಿಲಾಲೇಖದಲ್ಲಿ, ಈ ಪಟ್ಟಣವು ಸುಂದರವಾದ ಭವ್ಯ ಮಂದಿರಗಳಿಂದ ತುಂಬಿತ್ತೆಂದೂ ನದಿಯ ದಂಡೆಯ ಮೇಲೆ ವೀರಾಂಗನೆಯರ ಮುಖ ಕಮಲಗಳೇ ಕಾಣುತ್ತಿದ್ದುವೆಂದೂ ವರ್ಣನೆಯುಂಟು.
ನ್ನು, ನಾವು ಕರ್ನಾಟಕದ ಅರಸರೆಲ್ಲರೊಳಗೆ ಶ್ರೇಷ್ಠನಾದ ಚಾಲುಕ್ಯ ವಿಕ್ರಮ ಭೂಪತಿಯ ವರ್ಣನೆಯನ್ನು ಕೊಡುವೆವು. ಕವಿವರನಾದ ಬಿಲ್ಲಣನು ಈ ವಿಕ್ರಮದೇವನ ಚರಿತೆಯ ಬಗ್ಗೆ, ಸ್ವತಂತ್ರವಾದ ಒಂದು ಸಂಸ್ಕೃತ ಕಾವ್ಯವನ್ನೇ ರಚಿಸಿರುವನು, ಅದರೊಳಗಿನ ಒಂದೇ ಶ್ಲೋಕವನ್ನು ಇಲ್ಲಿ ಉದ್ಧರಿಸುತ್ತೇವೆ.

जनैरवज्ञातकवाटमुद्रणैः क्षपासु रक्षाविमुखैरसुप्यत |
करा विशन्ति स्म गवाक्षवर्मसु क्षपापतेश्छिद्रपथैर्न तस्कराः ॥

- विक्रमांकदेवचरित ९८-६

ಎಂದರೆ ಜನರು ರಾತ್ರಿಯಲ್ಲಿ ತಮ್ಮ ಬಾಗಿಲುಗಳನ್ನು ಕೂಡ ಮುಚ್ಚುತ್ತಿರಲಿಲ್ಲ; ಅವರಿಗೆ ಕಳ್ಳರ ಭೀತಿಯೇ ಇಲ್ಲ. ಕಳ್ಳರಿಗೆ ಬದಲು ಚಂದ್ರಕಿರಣಗಳು ಅವರ ಗೃಹಗಳನ್ನು ಪ್ರವೇಶಿಸುತ್ತಿದ್ದುವು. ಸಾರಾಂಶ:- ಈಗ, ರಾಮೇಶ್ವರದಿಂದ ಕಾಶಿಯವರೆಗೆ, ಕೋಲಿಗೆ ಬಂಗಾರ ತೂಗಹಾಕಿಕೊಂಡು ಹೋದರೂ ಅಂಜಿಕೆಯಿಲ್ಲವೆಂದು ಜನರು ನುಡಿಯುವಂತೆ, ಆಗ ಚಾಲುಕ್ಯ ವಿಕ್ರಮನ ಕಾಲದಲ್ಲಿ ಶಾಂತತೆಯು ಪೂರ್ಣವಾಗಿ ನೆಲೆಗೊಂಡಿತ್ತೆಂಬುದನ್ನು ಮೇಲೆ ಹೇಳಿದಂತೆ ವರ್ಣಿಸುತ್ತಿದ್ದರು.