ಪುಟ:Vimoochane.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾಫಿ ಹೀರುವುದು ಕಷ್ಟದ ಕೆಲಸವಾಗಿತ್ತು.........ಆದರೂ ಹೀರುವ ಯಂತ್ರದಂತೆ ಕಾಫಿ ಮುಗಿನಸಿದೆ.

ಜಿಲ್ಲಾಧಿಕಾರಿಗಳು ಸಭೆ ಮೆರವಣಿಗೆಗಳಾಗದಂತೆ ನಿಷೇಧಾಜ್ಞೆ ಹೊರಡಿಸಿದ್ದರು. ಅದು ಮೊದಲ ಕೆಲಸ. ಆ ಮೇಲೆ, ಕಾನೂನು- ನೆಮ್ಮದಿಯ ರಕ್ಷಕರಾದ ಪೋಲೀಸ್ ಅಧಿಕಾರಿಗಳು ತಮ್ಮ ಕೆಲಸ ನಡೆಸಿದ್ದರು.

....ಒಂದು ಕಾಲದಲ್ಲಿ ಆ ಕಾನೂನು-ನೆಮ್ಮದಿಯ ಶಾಖೆಗೂ ನನಗೂ ಸಮೂಹ ಸಂಬಂಧವಿತ್ತು. ಆದರೆ ಈಗ? ನಾನು ಪ್ರಭಾವ ಶಾಲಿಶಕ್ತಿಗಳ ಆಶ್ರಯದಲ್ಲಿದ್ದೆ.......ಆದಿನ. ಬಿ.ಎ.ಕಟ್ಟಿದ್ದ ಹುಡುಗನ ತಂದೆಯಾದ ಪೋಲೀಸ್ ಅಧಿಕಾರಿ ಜಂಭದಿಂದ ಆಡಿತೋರಿಸಿದ್ದ 'ಪೋಲೀಸರ ದೀರ್ಘಹಸ್ತ' ದಿಂದ ನಾನು ದೂರವಾಗಿದ್ದೆ.

ಆದರೆ ಆ ದೀರ್ಘ ಹಸ್ತವೀಗ ನಾರಾಯಣ ಮತ್ತಿತರರನ್ನು ಬಲಿ ತೆಗೆದುಕೊಳ್ಳುತಿತ್ತು-ಬೇರೆ ಕಾರಣಕ್ಕಾಗಿ.

ನಿನ್ನೆ ಶ್ರೀಕಂಠ ಪ್ರಸ್ತಾಪಿಸಿದ ಆ ವಿಷಯ ರೂಪಾ೦ತರಹೊ೦ದಿ ಈ ರೀತಿ ಪರ್ಯವಸಾನವಾಹಿತೆ ಹಾಗಾದರೆ? ಕೆಲಸಗಾರರ ಒಂದು ವಿಭಾಗದವರು ತಮ್ಮ ನಾಯಕರಿಗೇ ಹೊಡೆಯ ಹೋಗುವುದೆಂದ ರೇನು? ನಿಯೋಜಿತರಾದ ಕೆಲವರು ಆ ಕೆಲಸ ಮಾಡಿರಬೇಕು....ಆ ಸಂದರ್ಭವನ್ನಿದಿರುನೋಡುತಿದ್ದ ಪೋಲೀಸರು ಕೈಇಕ್ಕಿದುದೂ ಪೂರ್ವ ನಿಯೋಜಿತ ವ್ಯವಸ್ಥೆಗನುಸಾರನವಾಗಿಯೇ........

ಸಿಗರೇಟು ಕೋಂಡುಕೊಂಡು ಭಾರವಾದ ಹೆಜ್ಜೆಗಳನ್ನಿಡುತ್ತ ನಾನು ಮನೆಯತ್ತ ಸಾಗಿದೆ.

ಶ್ರೀಕಂಟನ ಕಾರು ಹೊರಗೆ ನಿಂತಿತ್ತು. ಆತ ಹಸನ್ಮುಖಿಯಾಗಿ

ಒಳಗೆ ಕುಳಿತಿದ್ದ.

"ಕಾಫಿಗೆ ಹೋಗಿದ್ದಿಯೇನಯ್ಯಾ?"

"ಹೂಂ ಎಷ್ಟೊತ್ತಾಯ್ತು ಬಂದು?"

"ಇದೇ ಈಗ್ಬಂದೆ. ನಡಿ ಒಳಕ್ಕೆ."

ನನ್ನ ಕೊಠಡಿಯಲ್ಲಿದ್ದ ಅಸ್ತವ್ಯಸ್ತವಾದ ಹಾಸಿಗೆಯನ್ನೂ ಪಕ್ಕ