ತನ್ನ ಕ್ಲಾಸ್ ಮೇಟಾಗಿ ಸದಾ ದಾದಾಗಿರಿ ಮಾಡುತ್ತಿದ್ದ ಸಾಹುಕಾರ ಕಲ್ಲಪ್ಪನವರ ಮಗ ಮಾರಪ್ಪ ಐವತ್ತೇ ಪರ್ಸೆಂಟು ಪಡೆದರೂ ಭಾಗ್ಯವು ಬಲವತ್ತುರವಾದುದರಿಂದ ಏನಕೇನ ಪ್ರಕಾರೇಣ ವಿಶೇಷ ಕೋಟಾದಲ್ಲಿ ಸೀಟು ಪಡೆದು ಮೆಡಿಕಲ್ ಕಾಲೇಜು ಸೇರಿದ್ದು ಪ್ರಾಣೇಸಶನಿಗೆ ತಿಳಿಯಿತು.ಆಗಲೂ ವಿಚಲಿತನಾಗದಷ್ಟು ಆತ ಅಗಲ ಸ್ಥಿತಪ್ರಙ್ನನಾಗಿ ಬಿಟ್ಟಿದ್ದ. ಕ್ರಿಷ್ಟಪ್ಟ ಮಾತ್ರ ಇಡೀ ಪ್ರಸಂಗದಿಂದ ಬಹಳ ನೊಂದುಕೊಂಡು ಮೂರು ದಿನ ಉಪವಾಸವಿದ್ದು ಇನ್ನೂ ಬಡಕಲಾದ. ಹಾಗೆ ಬಡಕಲಾಗುತ್ತಲೇ ಹೋದ ಕ್ರಿಷ್ಟಪ್ಪನ ಸಂಸಾರದ ಆರ್ಥಿಕ ಸ್ಥಿತಿಯೂ ಹದಗೆಡುತ್ತಲೇ ನಡೆಯಿತು.ಹೆಂಡತಿ ಪಾಶ್ವ್ರವಾಯುವಿನಿಂದ ಹಾಸಿಗೆ ಹಿಡಿದಿದ್ದಳು. ಅವಳಿಗೆ ಸರಿಯಾಗಿ ಔಷದೋಪಚಾರ ಮಾಡಿಸಲೂ ಆತನಿಗೆ ತಾಕತ್ತಿರಲಿಲ್ಲ. ವಾಸ್ತವವಾಗಿ ಆತ ಈಗ ಹಿರಿಯ ಮಗಳು ರಮಾಳ ಮದುವೆ ಮಾಡಬೇಕಿತ್ತು. ಇದ್ದೂರಲ್ಲೇ ಕಾಲೇಜಿತ್ತೆಂದು ಆಕೆ ಬಿ.ಎ. ವರೆಗೂ ಓದಿದ್ದಳು.ಫ಼ಸ್ಟ್ ಕ್ಲಾಸೂ ಸಿಕ್ಕಿತ್ತು. ಅಂಚೆ ಮೂಲಕ ಶಿಕ್ಷಣ ಪಡೆದು ಬಿ.ಎಡ್.ಸಹ ಮುಗಿಸಿದ್ದಳು ,ಆದರೆ ಬೆಳೆದ ಹುಡುಗಿ, ಸಂಪ್ರದಾಯಸ್ಥರ ಮನೆತನ, ನೌಕರಿ ಮಾಡುವುದು ಬೇಡ, ವರ ಹುಡುಕಿ ಲಗ್ನ ಮಾಡೋಣ,ಅಂತ ತಾಯಿ_ತಂದೆಯ ಅಭಿಪ್ರಾಯ. ಆದರೆ ವರ ಹುಡುಕಿದ ಕೂಡಲೇ ಸಿಗಬೇಕಲ್ಲ?ಆಷ್ಟರ ವರೆಗೆ ಇದ್ದೂರಲ್ಲೇ ಅನುಕೂಲವಾದ ನೌಕರಿ ಸಿಕ್ಕರೆ ಮಾಡುತ್ತೇನೆ ಅಂತ ರಮಾ ಹಟಮಾಡಿ ತಂದೆಯನ್ನು ಒಪ್ಪಿಸಿದ್ದಳು.ಶಿಕ್ಷಕಿ ಊರಲ್ಲಿ ಆ ವರ್ಷ ಒಂದು ಹುಡುಗಿಯರ ಹಾಯ್ ಸ್ಕೂಲ್ ಸುರುವಾಗಿತ್ತು. ಶಿಕ್ಷಕಿಯ ಜಾಗೆಗೆ ಕೊಟ್ಟ ಜಾಹೀರಾತಿಗೆ ರಮಾ ಅರ್ಜಿ ಹಾಕಿದ್ದಳು. ಜಾಹೀರಾತಿನಲ್ಲಿ ಕೇಳಿದ ವಿಷಯ_ಅರ್ಹತೆ ಎಲ್ಲ ಸರಿಹೊಂದುತ್ತಿದುತ್ತಿದ್ದುದರಿಂದ,ಬಿ.ಎಡ್.ಗೆ ಸಹ ಆಕೆ ಅವರು ಕೆಳಿದ ವಿಶೇಷ ವಿಷಯಗಳನ್ನೇ ಅಭ್ಯಸಿಸಿ ಒಳ್ಳೇ ಕ್ಲಾಸು ಪಡೆದಿದ್ದರಿಂದ ,ಅಕೆಗೆ ಕೆಲಸ ಸಿಗುವ ಬಗ್ಗೆ ಭರವಸೆಯಿತ್ತು.ಈಚೆಗೆ ಯಾವ ವಿಷಯದ ಬಗೆಗೂ ಭರವಸೆಯಿಟ್ಟುಕೊಳ್ಳುವುದನ್ನೇ ಬಿಟ್ಟಿದ್ದ ಕ್ರಿಷ್ಟಪ್ಪನಿಗೂ ಒಳಗೊಳಗೇ ಒಂದು ಆಸೆ ಹುಟ್ಟತೊಡಗಿತ್ತು _ಮಗಳಿಗೆ ನೌಕರಿ ಸಿಕ್ಕು ಒಂದೆರಡು ವರ್ಷ ಪಗಾರದ ಹಣ ಕೊಡಿಸಿ ಇಟ್ಟರೆ ಇದ್ದದ್ದರಲ್ಲೇ ಒಂದಿಷ್ಟು ಒಳ್ಳೇ ರೀತಿಯಿಂದ ಆಕೆಯ ಲಗ್ನ ಮಾಡಬಹುದು. ಮಗಳ ಬಾಳು ಸುರಳೀತವಾದರೆ ಸಾಕಲ್ಲ, ಉಳಿದದ್ದರ ಬಗ್ಗೆ ಯಾಕೆ ಸುಮ್ಮನೆ ವ್ಯರ್ಥ ಚಿಂತೆ? ಆದರೆ ವಿಧಿ ಆಲ್ಲೂ ಕ್ರಿಷ್ಟಪ್ಪನಿಗೆ ವಿರಿದ್ಧವಾಗಿತ್ತು. ರಮಾಗೆ ಎಲ್ಲಾ ಅರ್ಹತೆಗಳಿದ್ದರೂ. ಆ ಅರ್ಹತೆಗಳು ಸಂದರ್ಶನಕ್ಕೆ ಬಂದ ಬೇರಾವ ಆಭ್ಯಾರ್ಥಿನಿಗೂ
ಪುಟ:ನಡೆದದ್ದೇ ದಾರಿ.pdf/೩೧೩
ಗೋಚರ