ಈ ಪುಟವನ್ನು ಪ್ರಕಟಿಸಲಾಗಿದೆ
೧ | ನಿಮ್ಮ ಗ್ರಂಥಮಾಲೆಗೆ ವಾರ್ಷಿಕ ಚಂದಾಹಣ ಎಷ್ಟು? |
–೫-೧೦-೦; ಇದರಲ್ಲಿ ಅಂಚೆವೆಚ್ಚವೂ ಸೇರಿದೆ. | |
೨ | ವರ್ಷಕ್ಕೆ ಎಷ್ಟು ಗ್ರಂಥಗಳನ್ನು ಸಲ್ಲಿಸುತ್ತೀರಿ? |
— ೧೫೦ ಪುಟಗಳಂತೆ ಆರು ಕಂತುಗಳಲ್ಲಿ ಒಟ್ಟು ೯೦೦ ಪುಟಗಳನ್ನು ಒಂದು ವರ್ಷದಲ್ಲಿ ಸಲ್ಲಿಸುತ್ತೇವೆ. ಗ್ರಂಥಗಳು ಆರಾಗಬಹುದು, ಮೂರಾಗಬಹುದು, ಒಂದೇ ಆಗಬಹುದು. | |
೩ | ಯಾವ ಯಾವ ತಿಂಗಳುಗಳಲ್ಲಿ ಪ್ರಕಟಿಸುತ್ತೀರಿ? |
— ಅಗಸ್ಟ, ಅಕ್ಟೋಬರ, ಡಿಸೆಂಬರ, ಫೆಬ್ರುವರಿ, ಎಪ್ರಿಲ್, ಜೂನ್. | |
೪ | ಗ್ರಂಥಮಾಲೆಯ ಹೊಸ ವರ್ಷ ಪ್ರಾರಂಭ ಯಾವಾಗ? |
— ಅಗಸ್ಟದಿಂದ. | |
೫ | ಗ್ರಂಥಮಾಲೆಗೆ ಯಾವಾಗ ಬೇಕಾದಾಗ ಚಂದಾದಾರರನ್ನು ಮಾಡಿಕೊಳ್ಳುವಿರಾ? |
— ಚಂದಾದಾರರನ್ನು ಯಾವಾಗ ಬೇಕಾದರೂ ಮಾಡಿಕೊಳ್ಳುತ್ತೇವೆ. ಆದರೆ ವರ್ಷ ಪ್ರಾರಂಭದಿಂದಲೇ ಚಂದಾದಾರರನ್ನು ಮಾಡಿಕೊಳ್ಳುತ್ತಿರುವುದರಿಂದ ಆ ವರ್ಷದಲ್ಲಿ ಅವಧಿಯೊಳಗಾಗಿ ಪ್ರಕಟವಾಗಿರುವ ಗ್ರಂಥಗಳನ್ನು ಹೊಸ ಗ್ರಾಹಕರು ತೆಗೆದುಕೊಳ್ಳಬೇಕಾಗುವುದು. | |
೬ | ಗ್ರಂಥಮಾಲೆಯ ಹಿಂದಿನ ಪುಸ್ತಕಗಳನ್ನೆಲ್ಲಾ ಚಂದಾ ಸವಲತ್ತಿನಲ್ಲಿಯೇ ಕೊಡುವಿರಾ? |
— ಸಾಧ್ಯವಿಲ್ಲ. ಮುಖಬೆಲೆ ಕೊಟ್ಟು ಕೊಳ್ಳಬೇಕಾಗುವುದು. | |
೭ | ಚಂದಾಹಣ ಹೇಗೆ ಕಳುಹಿಸಬೇಕು? |
— ಮನಿಯಾರ್ಡರದಿಂದ ಅಥವಾ ವ್ಹಿ.ಪಿ.ಯಿಂದ ತರಿಸಿಕೊಳ್ಳುಬಹುದು. ಚೆಕ್ಕುಗಳನ್ನು ಸ್ವೀಕರಿಸಲಾಗುವುದಿಲ್ಲ. | |
೮ | ಯಾವ ವಿಳಾಸಕ್ಕೆ ಕಳಿಸಬೇಕು.? |
— ಕೆಳಗಿನ ವಿಳಾಸಕ್ಕೆ.
ಜಿ. ಬಿ. ಜೋಶಿ
ಮನೋಹರ ಗ್ರಂಥಮಾಲೆ ಧಾರವಾಡ |