ಈ ಪುಟವನ್ನು ಪರಿಶೀಲಿಸಲಾಗಿದೆ
೭೦
ನಡೆದದ್ದೇ ದಾರಿ
ಮೊದಲೆ,ವಿಧಿ ನಮ್ಮಿಬ್ಬರ ಭೆಟ್ಟಿ ಮಾಡಿಸಿದ್ದರೆ ಏನಾಗುತ್ತಿತ್ತು ಹೇಳಬಲ್ಲೆಯ ?
ಯಾಕೆ ಹಾಗಾಗಲಿಲ್ಲ ?....ಯಾಕೆ ?
ತಲೆ ಸುತ್ತಿ-ಸುತ್ತಿ ಬರತೊಡಗಿದೆ ಅವಳಿಗೆ.ಒಳಗಿನಿಂದ ಏನೋ ಉಕ್ಕುಕ್ಕಿ
ಹೊರಬರಲು ಪ್ರಯತ್ನಿಸುತ್ತಿರುವಂತೆ, ಆದರೆ ಸಾಧ್ಯವಾಗದೆ ಗಂಟಲಿನ ಬಳಿ
ತಡೆಹಿಡಿಯಲ್ಪಟ್ಟಂತೆ,ಉಸಿರು ಕಟ್ಟಿಹೋಗುತ್ತಿರುವಂತೆ ಭಾಸ.ತಡೆಹಿಡಿಯುವುದಿನ್ನು
ಅಸಾಧ್ಯವಾಗಿ ಎಲ್ಲಾ-ಎಲ್ಲಾ ಹೊರಗೆಡಹುತ್ತಿರುವೆನೆಂದು ಅನ್ನಿಸಿತು ಅಕೆಗೆ.
ತಟ್ಟನೆ ಅವಳು ಪಂಜರದ ಬಾಗಿಲನ್ನು ತೆರೆದುಬಿಟ್ಟಳು. ಬಿರುಗಾಳಿಯಂತೆ ಹೊರನುಗ್ಗಿದ
ಹರೀಶನ ಪ್ರೀತಿಯ ಗಿಳಿ ಕಿಡಿಕಿಯಿಂದಾಚೆ ಭುರ್ರೆಂದು ಹಾರಿ ಒಂದೇ ಕ್ಷಣದಲ್ಲಿ
ಹೊರಗಿನ ಮಸಗುಗತ್ತಲಲ್ಲಿ ಮರೆಯಾಗಿಹೋಯಿತು. ದೆವ್ವ ಬಡಿದಹಾಗೆ
ನಿಶ್ಚಲಳಾಗಿ ಆಕೆ ಅದು ಹಾರಿಹೋಗಿ ಮರೆಯಾದ ಕಡೆ-ಶೂನ್ಯದ ಕಡೆ-ನೋಡುತ್ತ
ನಿಂತಳು....ನಿಂತೇ ಇದ್ದಳು.