ಬಂದರ ಜನಸೇವಾ ಮಾಡ್ಲಿಕ್ಕೆ ಒಂದು ಅವಕಾಶ ಸಿಕ್ಹಾಂಗ ಆಗತದ. ಸುಮ್ನ
ಮನ್ಯಾಗ ಕೂತು ಯಾಕ ವ್ಯರ್ಥ ಕಾಲಹರಣ ಮಾಡಬೇಕು ಎಲ್ಲಾ ಹೆಂಗಸರ್ಹಾಂಗ?
ನಮ್ಮ ಕ್ಯೆಯಾಗ ಅಧಿಕಾರ ಇದ್ದರ ಬಡವ್ರು, ದುಃಖೀ, ಅನಾಥ ಹೆಂಗಸ್ರಿಗೆ ಏನಾದ್ರೂ
ಕಲ್ಯಾಣ ಮಾಡಬೇಕಂತ ಮನಸದ ನಂದು. ನಮ್ಮ ಹಿಂದೂ ಸಮಾಜದಾಗ ಹೆಂಗಸರದು
ಎಷ್ಟ ಶೋಷಣಾ ನಡೀತದ, ಏನ ಕಥಿ! ಹಾಂಗ ಶೋಷಣೆ, ಅನ್ಯಾಯ,
ಅತ್ಯಾಚಾರಕ್ಕೂಳಗಾದ ಹೆಂಗಸರ ಸಲುವಾಗಿ ಏನರೆ ಮಾಡಬೇಕು ಅಂತ ನ್ನನ
ಖಟಿಪಿಟಿ, ಅದಕ್ಕs ಈ ಧಾವತಿ...."
ಆಕೆಯ ಉದ್ದೇಶಕ್ಕೂ ಈ ಖಟಿಪಿಟಿ-ಧಾವತಿಗೂ ಇರುವ ಸಂಬಂಧವೇನೆಂದು
ಸರಿಯಾಗಿ ಅರ್ಥವಾಗದಿದ್ದರೂ ಶಶಿ ಅಂದಳು,"ಗುಡ್ ಲಕ್ ಮಿಸೆಸ್ ಪಟೇಲ,
ನೀವಂಧಾಂಗ ಎಲ್ಲಾ ಹೆಂಗಸ್ರೂ ಮನೀ-ಮಕ್ಕಳು-ಸಂಸಾರ ಅಂತ ಕೂತರ ಹೆಂಗಸರ
ಪ್ರಾಬ್ಲೆಮ್ಸ್ ಸಲುವಾಗಿ ಫ್ಯೆಟ್ ಮಾಡುವರ್ಯಾರು? ಎಲ್ಲಾ ಅನ್ಯಾಯನೂ ಸಹನ
ಮಾಡಿಕೋತ ಹೊಂಟಾರಂತs ನಮ್ಮ ಹೆಂಗಸರ ಮ್ಯಾಲ ದಿನಾ ದಿನಾ ಹೆಚ್ಚು ಹೆಚ್ಚು
ಅನ್ಯಾಯ ಆಗಲಿಕ್ಹತ್ಯಾವ. ಯಾರರೆ ಅನ್ಯಾಯದ ವಿರುದ್ಧ, ಅತ್ಯಾಚಾರದ ವಿರುದ್ಧ
ಬಂಡೇಳಬೇಕಲ್ಲ. ಅದು ನಿಮ್ಮಂಥಾ ಧೈರ್ಯದ ಹೆಂಗಸ್ರಿಗೆ ಆಗದಿದ್ದರ ಇನ್ಯಾರಿಗೆ
ಸಾಧ್ಯಾ ಆದೀತು?"
ಶಶಿಯ ಪ್ರಶಂಸೆಯಿಂದ ಉಬ್ಬಿದ ಮಾಲಿನಿಬಾಯಿ ಆಕೆಗೆ ಹೆಚ್ಛು ತೊಂದರೆ
ಕೊಡದೆ ಬೇಗನೆ ಹೊರತಟು ಹೋದಳು.
* * *
ಸಂಜೆ ಕೆಲಸ ಮುಗಿಸಿ ಸ್ಟೇಶನ್ ಕಡೆ ಹೊರಡುವ ಬಸ್ಸಿಗಾಗಿ ಶಶಿ ಕಾಯುತ್ತ
ನಿಂತಾಗ ಮತ್ತೆ ಬಂದ ಸತೀಶ ದೇಶಪಾಂಡೆ,"ಬ್ಯಾಸರ ಅಂತಿದ್ದಿ ಶಶಿ, ಪಿಕ್ಚರ್ ಬ್ಯಾಡ
ಅಂದಿ. ಜುಹೂ ಕಡೆ ಹೋಗೋಣ ಅಂದ್ರೂ ಬ್ಯಾಡ ಅಂದಿ. ನನ್ನ ಕ್ವಾರ್ಟರ್ಸ್ ಕಡೆ
ಹೋಗೋಣ ನಡಿ. ಇವತ್ತ ಫಸ್ಟ್ ಕ್ಲಾಸ್ ಆಯಿಸ್ಕ್ರೀಮ್ ಮಾಡೀನಿ. ಆಮ್ಯಾಲ
ಬೇಕಾದರ ನಿನ್ನ ಮುಳುಂದದ ತನಕಾ ಕಳಸ್ಲಿಕ್ಕೆ ಬರ್ತೀನಿ."
ಹೆಚ್ಛು ಹೇಳಿಸಿಕೊಳ್ಳದೆ ಶಶಿ ಆತನೊಂದಿಗೆ ಹಾಸ್ಟಿಟಲಿನ ಹಿಂಬದಿ ಅನತಿ
ದೂರದಲ್ಲಿದ್ದ ಡಾಕ್ಟರ್ಸ್ ಕ್ವಾರ್ಟರ್ಸ್ ಕಡೆ ಹೊರಟಳು.
ಸತೀಶನ ಫ್ಲ್ಯಾಟ್ ಸಾಕಷ್ಟು ಬೆಚ್ಚಗಿತ್ತು. ಆಯಿಸ್ಕ್ರೀಮ್ ಸಾಕಷ್ಟು
ತಂಪಾಗಿತ್ತ್ತು. ಬೆಡ್ರೂಮಿನ ಹವೆ ತುಂಬ ಬೆಚ್ಚಗಿತ್ತು.ಹೊರಗೆ ತುಂಬ ತಂಪಾಗಿತ್ತು.
ಸತೀಶನ ಅಪ್ಪುಗೆ ಎಷ್ಟು ಬೆಚ್ಚಗಿತ್ತು. ಶಶಿಯ ಮನಸ್ಸು ಎಷ್ಟೋ ತಂಪಾಯಿತು....
ಸತೀಶನಿಗೆ ಥ್ಯಾಂಕ್ಸ್ ಹೇಳಿ ಆಕೆ ರಾತ್ರಿ ಎಂಟರ ಲೋಕಲ್ನಲ್ಲಿ ಕೂತಾಗ