ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪ್ರಥಮಾಶ್ವಾಸಂ
೧೧

ಕಂ|| ದಂಪತಿಗಳೆ ಪುಟ್ಟುವರಾ
ರ್ಗ೦ ಪೊಲ್ಲಮೆ ಪುಟ್ಟದನತಿಶಯ ರೂಪ ಕಲಾ ||
ಸಂಪನ್ನರೆನಿಸಿ ಸುರಗತಿ
ಯಂ ಪಡೆವರ್ ಕಡೆಯೊಳುಚಿತ ಭಾಷಾವೇಷರ್ ||೬೧||

ಅಪಮೃತ್ಯು ವಿರಹಿತ೦ ಮೂ
ಳೈ ಪಳಿತಮಾಯುಷ್ಯಮುದ್ದಮರುಸಾಸಿರ ಬಿ ||
ಲ್ಲಪಸಾರಿತ ಮಲ ಮೂತ್ರಾ
ದಿ ಪರೀಷಹ ದೋಷಮಪಘನಂ ದ೦ಪತಿಯಾ ||೬೨||

ಮಾಲಿನಿ || ತ್ರಿದಿನದನಿತು ಕಾಲಕ್ಕೊರ್ಮೆ ಸಂಸಾರ ಸೌಖ್ಯ|
ಪ್ರದಮಿದೆನಿಪ ದಿವ್ಯಾಹಾರಮಂ ಭೋಜನಾಂಗಂ ||
ಬದರಫಲ ಸಮಾನಾಕಾರಮಂ ಕೊಟ್ಟುದಂ ಕೊಂ |
ಡುದರ ಬಲ ವಿಲಾಸ೦ಬೆತ್ತು ಯುಗ್ಮಂಗಳಿರ್ಕು೦||೬೩||

ಕಂ || ಸಿರಿಯ ಮೊಗರಸದ ಪೊಸ ಮೈ
ಸಿರಿಯೆನಿಕುಂ ಪೂಗೊಳಂಗಳಾ ನೆಲನನಿತು೦ ||
ಸುರಚಾಪದ ಬೆಳಕಿನ ಹರ
ವರಿಯೆನಿಕುಂ ಪಂಚರತ್ನರುಚಿ ವಲ್ಲರಿಯಿಂ||೬೪||

ಚತುರ೦ಗುಲಮೆನಿಸಿದ ತರು
ಣ ತೃಣ ಗ್ರಾಸದೊಳೆ ತಣಿದು,ತಿಳಿನೀರಂ ಪೀ ||
ರ್ದತನುಕ್ರೀಡಾ ರತ ಮೃಗ
ತತಿಗಳ್ ದಂಪತಿಗಳಲ್ಲಿ ನಲಿಯುತ್ತಿರ್ಕು೦||೬೫||

ಮ || ಕುಸುಮ ಸ್ರಗ್ವಸನಾನ್ನ ಪಾನವಿವಿಧಾತೋದ್ಯ ಪ್ರಕಾಶ ಪ್ರದೀ |
ಪ ಸುಧಾಸದ್ಮ ವಿಚಿತ್ರ ಭಾಜನ ವಿಭೂಷಾನೀಕಮಂ ಕೊಟ್ಟು ಸ೦ ||
ತಸಮಂ ಮಾಡೆ ದಶಾಂಗ ಕಲ್ಪತರುಗಳ್,ಸ್ವರ್ಗಕ್ಕೆ ಸಂಸಾರ ಸಾ
ರ ಸುಖಕ್ಕಗ್ಗಳಮೆನ್ನದಾ ಪ್ರಥಮಕಾಲ ಶ್ರೀಯನೇವಣ್ಣಿಪೆಂ||೬೬||

ಅ೦ತಾಕಾಲಮುತ್ತಮ ಭೋಗ ಭೂಮಿಸ್ಥಿತಿಯಿಂ ನಾಲ್ಕು ಕೋಟಿ ಕೋಟಿ
ಸಾಗರೋಪಮಮನುಕ್ರಮದಿಂ ಕುಂದುತ್ತುಂ ಬಂದನಂತರಂ ಸುಷಮಮೆಂಬೆರಡ
ನೆಯ ಕಾಲದ ಮಧ್ಯಮ ಭೋಗ ಭೂಮಿಸ್ಥಿತಿಯೊಳ್---


೧. ಡುದರ ಬಲ ನಿವಾಸ೦ಬಿತ್ತು, ಗ ; ಡದರ ಬಲದೆ ವಾಸ೦ಬತ್ತು, ಸ.
೨.ಪೊಸಮೊಗದ ಮೈಸಿರಿ ಸಿರಿ, ಕ, ಖ, ಗ, ಘ,