ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ರಾಮಚಂದ್ರ ಚರಿತಪುರಾಣಂ


ಕಂ॥ಅವಸರ್ಪಣದೊಳ್ ಕಾಲ
ವ್ಯವಸ್ಥೆ ಷಡ್ವಿಧಮೆನಿಕ್ಕುಮುತ್ಸರ್ಪಣದಂ ||
ತೆವೊಲಲ್ಲಿ ಮೊದಲ ಕಾಲಂ
ಪ್ರವರ್ತಿಕುಂ ಸುಷಮಸುಷಮಮೆಂಬೀ ಪೆಸರಿ೦|| ೫೫ ||

ಎರಡನೆಯ ಸುಷಮ ಕಾಲದ
ಪೊರೆಯೊಳ್ ಮೂಜನೆಯ, ಸುಷಮದುಷ್ಷಮ ಕಾಲ೦ ||
ಚರಿಯಿಸುಗುಂ ನಾಲ್ಕನೆಯದು
ಪರಿವಿಡಿಯಿಂದಪ್ಪುದಲ್ತೆ ದುಷ್ಷಮಸುಷಮಂ

ಅನುಸಂಧಾನ೦ಗಿಡದೈ
ದನೆಯದು ದುಷ್ಷಮಮೆನಿಪ್ಪ ಕಾಲ೦ ಬಳಿಕಾ ||
ರನೆಯದತಿದುಷ್ಷಮಂ ವ
ರ್ತನಮಿಂತೀ ತೆರನೆ ರಹಟಘಟಿಕಾ ನ್ಯಾಯಂ || ೫೭ ||

ತನುಭೋಗಾಯುಷ್ಯಂಗಳ್
ಮನುಷ್ಯರೊಳ್ ಪೆರ್ಚುವಡೆಗುಮುತ್ಸರ್ಪಣದೊಳ್ / ||
ತನು, ಭೋಗಾಯುಷ್ಯಂಗಳ್
ಮನುಷ್ಯರೊಳ್ ಕುಂದುವಡೆಗುಮವಸರ್ಪಣದೊಳ್ || ೫೮ ||

ಎರಡು ಯುಗಮೊಂದೆ ಕಲ್ಪಂ
ನಿರಂತರಂ ಶುಕ್ಲ ಕೃಷ್ಣ ಪಕ್ಷಂಗಳವೋಲ್ ||
ಪರಿವರ್ತಿಸುಗುಂ ತತ್ಕ
ಲ್ಪ'ರಾಜಿಗಾರಯ್ವೊಡಿಲ್ಲ ಮೊದಲುಂ ತುದಿಯುಂ || ೫೯ ||

ಇಂತನಂತಾನಂತ ಕಲ್ಪ ಪರಿವರ್ತನಮಪ್ಪುಕೆಯ್ದ ಆರ್ಯಾಖಂಡದವಸರ್ಪಣದ
ದಲ ಕಾಳದೊಳ್

ಸ್ರ|| ಸುರಭೂಜಂ ಜ್ಯೋತಿರಂಗಂ ಬೆಳಗೆ ತಮದ ಮಾತಿಲ್ಲ! ಚಂದ್ರಾರ್ಕರುಂ।
ಮೈಗರೆದಿರ್ಪರ್ ತೋರವಾರುಂ ಋತುಪಗಳಿರುಳೆಂಬೀ ವಿಭೇದಂಗಳಿಲ್ಲಾ||
ಳರಸೆಂಬೀ ಪಂಬಲಿಲ್ಲಾರ್ಜವರ ಮನುಜರೆಲ್ಲಂ ಜರಾತಂಕಮಿಲ್ಲಾ |
ತುರಮಿಲ್ಲಾಶ್ಚರ್ಯಭೂತಂ ಸುಷಮಸುಷಮ ಕಾಲಸ್ವಭಾವ ಪ್ರಭಾವಂ|| ೬೦ ||


೧. ಕೃಷ್ಣ ಶುಕ್ಲ, ಚ.
೨. ರಾಶಿ. ಕ, ಖ, ಗ, ಘ.
೩, ಅ೦ತನ೦ತ, ಕ, ಖ.