ಕಂ || ಸಮಯ ಸಮೂಹಮಸಂಖ್ಯಾ
ತಮಾದೊಡಾವಳಿಯನಿಕ್ಕುವವಳಿ ಸಂಖ್ಯಾ ||
ತಮೆನಿಪ್ಪು ದಾದೊಡುಚ್ಛ್ವ
ಸಮೆನಿಕ್ಕುಂ ಸೈಕಮಕ್ಕು ಮೇಲುಚ್ಛ್ವಸಂ
ಸ್ತೋಕಂ ನೆರೆದೇಜಾಗೆಲ
ವಾಕಾಲಂ ಮೂವತೆಂಟುವರೆಯೆನಿಪಲವಾ ||
ನೀಕಂ ನಾಳಿಕೆ ತನ್ನಾ
ಳೀಕಾಲ ಯುಗಂ ಮುಹೂರ್ತವೇನೆ ವರ್ತಿಸುಗುಂ ||೫೦||
ಸಮಯಂ ಕುಂದೆ ಮುಹೂರ್ತದೊ
ಳಮೋಘಮಂತರ್ಮುಹೂರ್ತಮಕ್ಕುಂ ಮೂವ ||
ತ್ತು ಮುಹೂರ್ತಮಾಗೆ ದಿವಸಂ |
ಕ್ರಮದಿಂ ಪದಿನೈದು ದಿವಸವಾದೊಡೆ ಪಕ್ಷಂ | ||೫೧||
ಮಾಸಂ ಪಕ್ಷದ್ವಿತಯಂ
ಮಾಸದ್ವಯಮೊಂದೆ ಋತು ಋತುತ್ರಯಮಯನ ||
ನ್ಯಾಸಮಯನ ದ್ವಯಂ ಜಿನ
ಶಾಸನದೊಳ್ ವರ್ಷನುಯ್ದು ವರ್ಷದೊಳೆ ಯುಗಂ ||೫೨||
ಎರಡು ಯುಗಂ ದಶವರ್ಷ೦
ತರತರದಿಂದಿಂತು ದಶಗುಣಂ ಪೆರ್ಚುತ್ತುಂ ||
ಬರ ಪೆರ್ಚುವ ಕಾಲಕಲಾ
ಪರಿಸಂಖ್ಯೆ ಯನಾವನವನಾತನೆ ದೇವಂ ||೫೩||
ತವು ತಾರವು ನಿನ್ನೆಗಳುಂ
ಸವೆಯವು ನಾಳೆಗಳುಮುದಳೆ ನೆನೆಯದು ಲೆ ||
ಕ್ಕವಿಡಲ್ ಶಬ್ದಂ ನೆರೆಯವು
ಪವಣಿಸನೆ ಕಂಡರಾರೊ ಕಾಲದ ಪವಣಂ ||೫೪||
1. ಲತಾ ಕಾಲಂ. ಚ. 2. ಲತಾನೀಕಂ. ಚ.
3. ತವೆ ಸಾರವು. ಕ. ಖ. ಗ. ಘ. ; ತವತಾರವು. ಚ.
4. ನೆಲೆ. ಕ. ಖ. ಗ. ಘ.
5. ಕಡೆಯ೦. ಗ. ಘ.