ಇನ್ನಷ್ಟು ಕತೆಗಳು /ದೆವ್ವ ೪೭೭
ನಗು ಬಂದಿತು ಆತನಿಗೆ. ನಗು ತುಟಿಯಂಚಿನಲ್ಲಿ ಮೂಡುವುದಕ್ಕೂ ಕಣ್ಣು ಮಿಸ್ ಗೊಖಲೆಯ ಕಡೆ ತಿರುಗುವುದಕ್ಕೂ ಸಮನಾಯಿತು. ಒಂದು ಕ್ಷಣ ಕಕ್ಕಾಬಿಕ್ಕಿಯಾದರೂ ಮರುಕ್ಷಣ ಸಾವರಿಸಿಕೊಂಡು ನಗೆಯರಳಿಸಿದ ಅವಳ ಚಾಣಾಕ್ಷತೆಯ ಬಗ್ಗೆ ಮೆಚ್ಚಿಗೆಯೆನಿಸಿತು.
ಏ ಮುದುಕಾ, ಯಾಕೆ ಹೀಗೆ ಸಿಕ್ಕಾಪಟ್ಟೆ ಮಾತಾದುತ್ತಿದ್ದೀ ? ಕ್ಲಾಸಿನಲ್ಲಿ ನಿರ್ಭಗ್ಯಾ ಹುಡುಗರಿಗೆ ಸುಳ್ಳುಒಳ್ಳು ಸೇರಿಸಿ ಲೆಕ್ಚರು ಕುಟ್ಟಿ ಅಭ್ಯಾಸ ನಿನಗೆ. ನಾನು ಯಾವ ಕಲೆಯ ಸೇವೆಗೂ ಹೊರಟಿಲ್ಲವೋ. ನನಗೊಂದು ದೆವ್ವ ಬೆನ್ನು ಹತ್ತಿದೆ. ಅದರಿಂದ ತಪ್ಪಿಸಿಕೋಳ್ಳಬೇಕಾಗಿದೆ ನನಗೆ. ನನ್ನಿಂದ ನನಗೆ ದೂರ ಹೋಗಲು ಸಾಧ್ಯವೇನೋ ನೋಡಲು ಹೊರಟಿದ್ದೇನೆ... ಓಡಿ ಹೂರಟಿದ್ದೇನೆ...
ಪ್ಯಾರಿಸ್ಸಿನಲ್ಲಿ ತನ್ನ ಸ್ಕೂಟರ್ ಮೇಲೆ ದಿನಾ ಹೊಸ-ಹೊಸ ಹುಡುಗಿಯರನ್ನು ಕರೆದೆಊಯ್ಯು ಕನಸು ಕಾಣುತ್ತಿದ್ದಾಗ ಕಾತರದ ದನಿಯಲ್ಲಿ ಅವನ ಹೆಂಡತಿ ಕೇಳಿದ್ದಳು ಒಂದು ರಾತ್ರಿ. "ನೀವು ಲಗೊ ಬರಬೇಕು, ನೀಎಲ್ಲದನಾಹ್ಯಾಂಗ ಇರ್ಲಿ ?"" ಕಾಣುತ್ತಿದ್ದ ಕನಸಿನಿಂದ ಹೊರಬರದೆಯೆ. ಅವಳು ಮುಂದೆ ಮಾತಾಡಂತ ಅವಳ ಬಾಯಿಯ ಮೇಲೆ ತುಟಿಯೂರಿ ಪಿಸುಗುಟ್ಟಿದ್ದ ತಾನು. ""ನಾ ಎಲ್ಲಿದ್ರೂ ನನ್ನೆ ಮನಸ್ಪು ಇಲ್ಲೇ ಇರ್ತದ." ಅವಳಿಗೆ ಸಮಾಧಾನವಾಗಲು ಅಷ್ಟು ಸಾಕಾಗಿತ್ತು
'ದೇವರು ಇವರಿಗೆ ದೀಫ್ರಾಯುಷ್ಯ ಕೊಡಲಿ.'
ಬೇಡವೋ ಮುದುಕಾ, ನಾನು ಕಂಡ ಬದುಕು ನನಗೆ ಸಾವಿನ ಬಗ್ಗೆ ಅಗಾಧ ಪ್ರೀತಿ ಹುಟ್ಟಿಸಿದೆ...
ಮುದುಕ ಪ್ರಿನ್ಸಿಪಾಲರ ಭಾಷಣ ಮುಗಿಯಿತೆಂದು ಸಮಾಧಾನದ ನಿಟ್ಟುಸಿರು ಬಿಡುವಾಗ ಮತ್ತೊಬ್ಬ ಬಂದು ನಿ೦ತ. ಕನ್ನಡ ಲೆಕ್ಚರರ್ ಅ೦ದರು ಯಾರೋ-ಸರಿ. ಇನ್ನಿವನು ತಾನು ಕಲಿತ ವಿಮಶ್ರೆಯ ತೆತ್ವಗಳನ್ನೂ. ನಾಟಕಗಳನ್ನೂ ಕುರಿತು ಉಪನ್ಯಾಸ ಮಾಡುವನೋ ಎಂದು ಕಸಿವಿಸಿಯಾಯಿತು ಆತನಿಗೆ. ಪಕ್ಕಕ್ಕೆ ತಿರುಗಿ ನೋಡಿದ. ಹೆಂಡತಿ ಬಿಟ್ಟ ಕಣ್ಣುಗಳಿಂದ ಭಾಷಣಕಾರನನ್ನೆ ನೋಡುತ್ತಿದ್ದುದನ್ನು ಖಚಿತಪಡಿಸಿಕೋಂಡು ಮಿಸ್ ಗೋಖಲೆಯ ಕಡೆ ಹೊರಳಿದ. ಆಕೆ ಅವನನ್ನೇ ನೋಡುತ್ತಿದ್ದವಳು ಈ ಸಲ ಬೆಚ್ಚದೆ ನಿಧಾ೯ರದ ನಗೆ ಬೀರಿದಳು.
'ಇವರ ಭಾಷೆಯ ವೈಶಿಷ್ಟಯವೆಂದರೆ ಸೊಜೆಯ ಮೊನೆಯಂತಹ ವ್ಯಂಗ್ಯ ; ಹರಿತವಾದ ಬಾಣದೆಂತೆ ಇವರ ಟೀಕೆ ; ಬಾರುಕೋಲಿನಿಂದ ಹೊಡೆದೆಬ್ಬಿಸಿದಂತೆ ಇವರ ಮಾತು...' ಆ ಮಹಾಶಯನ ಉಪಮೆಗಳ ಪಟ್ಟ ಮುಗಿಯುವಂತೆಯೇ ಕಾಣಲಿಲ್ಲ.
ವ್ಯಂಗ್ಯ-ಟೀಕೆ... "ನಿನ್ನೆ ನೋವನ್ನು ಮರೆಯಲು ಇತರರನ್ನು ನೋಯಿಸಿ