೩೩೪
ನಡೆದದ್ದೇ ದಾರಿ
ಬರುವುದಿಲ್ಲ. ಅದು ದೊಡ್ಡ ಕಾಲೇಜು ಅವಳ ಪ್ರಕಾರ. ಆದರೂ ಜಂಭವೆಷ್ಟು ಆ ಮುದುಕಿಗೆ. ಬರೇ ಸೊಕ್ಕಿನ ಮಾತೇ. ಶಂಕರ ಮಾತ್ರ ಹಾಗಲ್ಲ ....
ತಾನೂ ರಾಂಕ್ ಪಡೆದು ಟೆಕ್ನಾಲಜಿ ಕಲಿಯಬೇಕು. ಆಗ ಶಂಕರನ ಅಮ್ಮನ ಸೊಕ್ಕು ಮುರಿಯುತ್ತದೆ. ಛೀ, ಈ ಶಂಕರ ಇಷ್ಟು ಕೆಟ್ಟವನು ಅಂತ ಗೊತ್ತಿದ್ದರೆ.... *** ಶನಿವಾರ ಬೆಳಗಿನ ಸ್ಕೂಲು ಮುಗಿಸಿ ಮನೆಗೆ ಬಂದಾಗ ಪಡಸಾಲೆಯಲ್ಲಿನ
ದೊಡ್ಡ ಟೇಬಲ್ ಮೇಲೆ ಆಕೆಗೆ ತನ್ನ ಹೆಸರು ಹೊತ್ತ ನೀಲಿಬಣ್ಣದ ಕವರೊಂದು ಕಾಣಿಸಿತು. ಪಟಕ್ಕನೆ ಅದರ ಮೇಲೆ ಹಾರಿ ಹಿಡಿದುಕೊಂಡು ಆಕೆ ಒಂದೇ ಓಟಕ್ಕೆ ಮಹಡಿ ಏರಿದಳು, 'ಏ ಶಾಂತೀ, ಚಹಾ ತಗೊಂಡು ಹೋಗs' ಅಂತ ಅಮ್ಮ ಕೂಗುತ್ತಿದ್ದರೂ ಲಕ್ಷಿಸದೇ.
ರೂಮಿನ ಬಾಗಿಲು ಹಾಕಿಕೊಂಡು ಪುಸ್ತಕಗಳನ್ನು ಬೀಸಾಡಿ ಮಂಚದ ಮೇಲೆ
ಕುಳಿತು ಕವ್ಹಹರನ್ನು ಬಿಡಿಸಲೆತ್ನಿಸಿದಾಗ ಆಕೆಗೆ ತನ್ನ ಕೈಗಳು ನಡುಗುತ್ತಿದ್ದುದು ಗಮನಕ್ಕೆ ಬಂದಿತು. ಯಾಕೋ ಏನೋ ಆಗಬಾರದ್ದು ಆಗುತ್ತಿದೆ ಅನಿಸಿತು. ಯಾಕಾದರೂ ತಾನು ಈ ಶಂಕರನಿಗೆ ಪತ್ರ ಬರೆಯಲು ಬೇಡವೇ ಬೇಡ ಅಂತ ತಾಕೀತು ಮಾಡಲಿಲ್ಲವೋ ಅನಿಸಿತು. ಪತ್ರ ಒಡೆಯುವ ಮುನ್ನ ಆಕೆ ದೇವರಿಗೆ ಕೈಮುಗಿದಳು. ಇದರಲ್ಲಿ 'ಕೆಟ್ಟದ್ದು' ಏನೂ ಇರದಿರಲಿ ಅಂತ ಪ್ರಾಥಿಸಿದಳು. ನಂತರ ಧೈಯವಾಗಿ ಕವ್ಹರು ಹರಿದು ಒಳಗಿನ ಕಾಗದ ತೆರೆದಳು, ಓ, ಶಂಕರನ ಕೈಬರಹ ಎಷ್ಟು ದುಂಡಗಿದೆ! ಅವನು 's' ಬರೆಯುವ ರೀತಿ ಎಷ್ಟು ಮೋಹಕ! ಇಷ್ಟು ಛೇಂದ ಇಂಗ್ಲೀಶ್ ಅಕ್ಷರ ಬಹುಶಃ ಶೇಕ್ಸ್ ಪಿಯ ರ್ ನೂ ಬರೆಯುತ್ತಿರಲಾರ.
"My dearest Shanthi" .......... ಅಂತ ಸುರುವಾಗಿತ್ತು ಪತ್ರ.
'Dearest' ? Dear, Dearer ! Dearest ! ಅಂದರೆ ಎಲ್ಲರಿಗಿಂತ,ಎಲ್ಲಕ್ಕಿಂತ ಹೆಚ್ಚು ಪ್ರೀತಿಯ ! ಎಲಾ ಇವನ....
ಏನೇನೋ ಬರೆದಿದ್ದಾನೆ ಶಂಕರ. ಆದರೆ ಓದಿ ಖುಶಿಯಾಗುತ್ತಿದೆ- 'ನಿನ್ನ ಕಣ್ಣು
ಎಷ್ಟು ಚೆಂದ. ನನ್ನ ಕನಸಿನ ತುಂಬ ಬರೀ ನಿನ್ನ ನಗುಮುಖ.ನನಗೆ ನಿದ್ರೆಯೇ ಬರುವುದಿಲ್ಲ.ಅಭ್ಯಾಸ ಮಾಡಲು ಆಗುವುದಿಲ್ಲ. ಬರೇ ನಿನ್ನ ನೆನಪು. ನಾನು ನಿನ್ನನ್ನು ಪ್ರೀತಿಸುತ್ತೇನೆ ಶಾಂತೀ'-
ಆಕೆ ಒಮ್ಮೆಲೇ ಬೆಚ್ಚಿಬಿದ್ದಳು. 'I love you Shanthi' - ಓ,ಎಂಥ
ಶಕ್ತಿಯಿದೆ ಈ ಇಂಗ್ಲೀಶು ಭಾಷೆಯಲ್ಲಿ. ಕನ್ನಡದ 'ಪ್ರೀತಿ' ಗಿಂತ ಈ Love ಎಷ್ಟು