ವಿಷಯಕ್ಕೆ ಹೋಗು

ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ವುದಕ್ಕೆ ಉಪಕ್ರಮಿಸಿದರು. ಆಗ ಕೆಲಿಪ್ರೊ ಎಂಬ ಕಿನ್ನರಿಯ ಟೆಲಿಮಾಕಸ್ಥ ನನ್ನು ಕುರಿತು ಹೇಳಿದ್ದೇನಂದರೆ :- ( ಎಲೈ ಮನ ಧಸದೃಶನಾದ ಟೆಲಿಮಾಕಸ್ಸನೇ, ನೀನು ಮರ್ತಿಮ ತಾದ ಯಲಸೆಸ್ಸಿನ ವ್ಯವೆಂದು ಹೇಳಬಹುದು, ನನ್ನ ಭಾಗ್ಯ ಪರಿಪಾಕದಿಂದ ನೀನು ನನ್ನ ದ್ವೀಪಕ್ಕೆ ಬಂದಿರುವೆ. ಇದು ನಿನ್ನ ಬ್ಲ್ಯಾಗತರಿಪಾಕವೆಂಬದಾ ಗಿಯೂ ತಿಳಿದುಕೊ, ನಾನು ಸಾಮಾನ್ಯಳಲ್ಲ. ಜರಾಮರಣಗಳಿಗೆ ಅಧೀನ ಳಾಗದ ದೇವತೆಯಾಗಿ ನಾನು ಇರುವೆನು, ಮನುಷ್ಯ ಮಾತ್ರದವರಿಗೆ ನಾನು ಸ್ವಾಧೀನಳಾಗತಕ್ಕ ವಳಲ್ಲ. ಸೀನು ಮನುಷ್ಯನಾಗಿದ್ದಾಗ್ಯೂ, ನಿನ್ನ ಪುಣಪರಿಪಾ ಕದಿಂದ ನಿನ್ನಲ್ಲಿ ನನಗೆ ಅನುರಾಗವು ಉಂಟಾಗಿರುವುದು, ನಿನ್ನ ತಂದೆಯು ನನ್ನ ವಿಶ್ವಾಸಕ್ಕೆ ಪಾತ್ರನಾಗಿದ್ದನು. ಆದರೆ ನನ್ನ ಪ್ರೀತಿಯ ಫಲವನ್ನು ಹೊಂದುವು ದಕ್ಕೆ ಅವನಿಗೆ ಅದೃಷ್ಟವಿರಲಿಲ್ಲ. ಇಲ್ಲಿ ಸುಖವಾಗಿರುವುದಕ್ಕೆ ಅವನಿಗೆ ಅವಕಾಶ ಮಾಡಿದ್ದೆ ನು. ನನ್ನ ಜತೆಯಲ್ಲಿ ನಿತ್ಯ ಸುಖವನ್ನು ಅನುಭವಿಸಿಕೊಂಡು, ಅವನು ಇರಬಹುದಾಗಿತ್ತು. ತನ್ನ ದ್ವೀಪಕ್ಕೆ ಹೋಗಿ, ತನ್ನ ಸಂಸಾರ ಸುವನ್ನು ಪಡೆ ಯುವುದರಲ್ಲಿ ಅವನಿಗೆ ಆಸಕ್ತಿಯು ಹೆಚ್ಚಾಗಿ ಹುಟ್ಟಿತು. ದೇವತೆಗಳಿಗೂ ದುರ್ಲಭವಾದ ಈ ಸುವಿವು ಅವನಿಗೆ ರುಚಿಸಲಿಲ್ಲ. ಇವನ ರಾಜ್ಯಕ್ಕೆ ಇವನು ತಲುಪುವುದಿಲ್ಲ, ಇಲ್ಲಿ ನಾನು ಕೊಡತಕ್ಕ ಸುಖವನ್ನು ಇವನು ಅನುಭವಿಸಲಿಲ್ಲ. ನನ್ನ ಆಜ್ಞೆಯನ್ನು ನಿರಾಕರಿಸಿ, ಇವನು ಹೊರಟುಹೋದನು. ಇವನಿಗೆ ಆಟ್ಗೊ ಲ್ಲಂಘನೆಗೆ ತಕ್ಕ ಶಿಕ್ಷೆಯು ಆಯಿತು, ಒಂದು ರುಯು ಉಂಟಾಗಿ, ಅವನಿದ್ದ ಹಡಗು ಪಾತಾಳಕ್ಕೆ ಹೋಯಿತು, ನಿನ್ನ ತಂದೆಯು ಮಾಡಿದ ತಪ್ಪನ್ನು ನೀನು ಮಾಡಬೇಡ, ಅವನನ್ನು ನೋಡುವ ಆಸೆಯನ್ನು ಬಿಟ್ಟು ಬಿಡು, ಇಥಾಕಾ ರಾಜ್ಯದ ಸಿಂಹಾಸನದ ಆಶೆಯನ್ನು ಬಿಡು. ಇದಕ್ಕಾಗಿ ವ್ಯಸನಪಡಬೇಡ. ದೇವತೆಯಾದ ನಾನು ನಿನಗೆ ಸಿಕ್ಕಿರುವೆನು, ನನ್ನ ರಾಜ್ಯಕ್ಕೆ ಹೋಲಿಸುವ ರಾಜ್ಯವು ಪ್ರಪಂಚದಲ್ಲೇ ಇರುವದಿಲ್ಲ, ನನ್ನ ಅನುರಾಗಕ್ಕೆ ಪಾತ್ರನಾಗುವುದ ರಿಂದ, ನಿನಗೆ ಈ ಮೈಪು: ಸ್ವರ್ಗವಾಗಿ ಪರಿಣಮಿಸುವುದು ಎಂದು ಈ ಹಿನ್ನ ರಿಯು ಹೇಳಲು, ಟೆಲಿಮಾಕಸ್ಸನು ಹೇಳಿದ್ದೇನೆಂದರೆ :- “ ಎಲೈ ಕಿನ್ನರಿಯೆ, ಕ್ಷಮಿಸಬೇಕು. ಈಗ ನನಗೆ ಯಾವ ಸುಖವೂ ಬೇಕಾಗಿಲ್ಲ. ಪಿತೃವಿಯೋಗ ದುಃ:ವು ನನಗೆ ಹೃದಯತಲ್ಲವಾಗಿದೆ. ನನ್ನ ತಂದೆಯು ಲೋಕೋತ್ತರವಾದ ಗುಣಾತಿಶಯಗಳನ್ನು ಹೊಂದಿದ್ದನು. ಅಂಥಾ ವನನ್ನು ಕಳೆದುಕೊಂಡವನಿಗೆ ಸುಖದಲ್ಲಯ, ಸಾಂಮಾಜದಲ್ಲಯ ಯಾವ ಅಭಿರುಚಿಯು ತಾನೆ ಉಂಟಾಗುವುದು ? ಇಂಥ ತಂದೆಯು ಹೋದ ಮೇಲೆ