ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿತ್ರಭೇದತಂತ್ರ ಸರ್ವಾಂಗದಲ್ಲಿ ಇರುವುದು, ಕಪಟವಿಲ್ಲದವನೇ ಮಿತ್ರನು, ಯುದ್ಧ ರಂಗದಲ್ಲಿ ತನ್ನ ಸಾಮಿಕಾರಕ್ಕೆ ಹಿಂದೆಗೆಯದವನೇ “ತನು, ಮದ ವನ್ನು ಹುಟ್ಟಿಸದುದೇ ಸಂಪತ್ತು, ಸತ್ಪುರುಷರಿಂದ ಪ್ರಾರ್ಥಿಸಲ್ಪಟ್ಟ ವನೇ ಬುದ್ದಿವಂತನು, ಇಂದ್ರಿಯಗಳನ್ನು ಜಯಿಸಿದವನೇ ಪುರುಏನು, ಹಿತರ ಮಾತನ್ನು ಕೇಳಿದವನೇ ಅರಸನು. ಈರೀತಿಯಲ್ಲಿ ಎಷ್ಟು ಹೇಳಿದರೂ ಸಂಜೀವಕನಿಗೆ ಪಿಂಗಳಕನ ಮೇಲೆ ಮನಸ್ಸು ಒಡೆಯದೆ ಇರುವುದನ್ನರಿತು ದಮನಕನು ಮರಳಿ ಇಂತೆಂದನು;ಎಲೈ ಮೃಗಕುಲಸಾರಭೌಮನೇ, ನಾನೆಷ್ಟು ಬಿನ್ನೈ ಸಿದರೂ ಸಂಜೀವಕನ ಮೇಲೆ ತಗುಲಿವ ನಿಮ್ಮ ಮನಸ್ಸು ತಿರುಗಲಿಲ್ಲ. ಆದುದರಿಂದ ಇನ್ನು ಭತನ ಮೇಲೆ ದೋಷವಿಲ್ಲ. ಅಧಿಕಾಸಕ್ತನಾದ ಅರಸನು ಕಾರಾಕಾರೈವನ್ನರಿಯದೆ, ಮದಿಸಿದ ಆನೆಯ ಹಾಗೆ ಮನಸ್ಸು ಬಂದಂತೆ ನಡೆಯುವನು, ಬಳಿಕ ಮಂತ್ರಿ ಮುಂತಾದವರ ದೋಷಗ ಳನ್ನು ಚೆನ್ನಾಗಿ ವಿಚಾರಿಸದುದರಿಂದ ಅವರನ್ನು ಶಿಕ್ಷಿಸಲಾರದೆ ಶೋಕಾ ರಣದಲ್ಲಿ ಬೀಳುವನು, ಆಗ ಆತನು ತನ್ನ ಛತನಲ್ಲಿ ತಪ್ಪೆನಿಸುವನೇ ಹೊರತು ತನ್ನ ತಪ್ಪನ್ನು ತಾನು ತಿಳಿದುಕೊಳ್ಳಲಾರನು-ಎಂದನು. ಆಮಾತನ್ನು ಕೇಳಿಸಂಜೀವಕನ ನಿರಾಕರಿಸಿ ಹೊರಡಿಸಿ ಬಿಡೋಣವೇ ಎಂದು ಪಿಂಗಳಕನು ನುಡಿದನು. ಅದಕ್ಕೆ ಸ್ವಾಮಿಾ, ಹಾಗೆ ಮಾಡಿದಲ್ಲಿ ಮಂತ್ರವು ಭೇದಿಸುವುದು. ನಿರಾಕರಿಸಿದ ಬಳಿಕ ಸಂಜೀವಕನು ತುಂಬಾ ಅಪಕಾರವನ್ನು ಮಾಡುವನು. ಪರಿಪಕ್ಷವಾದ ಮಂತ್ರವೆಂಬ ಬೀಜವನ್ನು ಪ್ರಯತ್ನ ಪೂರ್ವಕವಾಗಿ ರಕ್ಷಿಸಬೇಕು. ಅದು ಸ್ವಲ್ಪವಾದರೂ ಭೇದಿಸಲ್ಪಡಕೂಡದು, ಭೇದಿಸಲ್ಪಟ್ಟರೆ ಕೆಟ್ಟು ಹೋಗುವುದು ಎಂದು ದಮನಕನು ಹೇಳಿದನು. ಸಂಜೀವಕನು ನಮಗಪಕಾರಮಾಡುವನೇ ? ಎಂದು ಪಿಂಗಳಕನು ಮತ್ತೆ ನುಡಿದನು, ಅವನ ಸ್ವಭಾವ ನಮಗೆ ತಿಳಿಯದಾದುದರಿಂದ ನಾವು ಹೇಗೆ ನಿತ ಹೊಸ ಬಹುದು? ಯಾವನಿಗಾದರೂ ಅವನ ಸ್ವಭಾವ ತಿಳಿಯದೆ ಆಸ್ಪದ ಕೊಡಬಾರದು. ಅಜ್ಞಾತವಾದ ಸ್ವಭಾವವುಳ್ಳ ಡಿಂಡಿಮಕ್ಕೆ ತಾವನ್ನು