ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಪಂಚತಂತ್ರ ಕಥಗಳು. ಕೊಟ್ಟುದರಿಂದ ಮಂದವಿಸರ್ಪಿಣಿ ಮತವಾಯಿತು~ ಎಂದು ದಮನಕನು ಹೇಳಿದನು. ಪಿಂಗಳಕನು--ಆ ಕಥೆಯೇನು ?-ಎಂದು ಕೇಳಲು, ದಮ ನಕನಿಂತೆಂದನು, It is improper to give adımission to a person whose character is unknown. The Imouse and the Bug. ಮಂದವಿಸರ್ಪಿಣಿ ಎಂಬ ಒಂದು ಕರೆ ಬಹುಕಾಲದಿಂದ ಅರಸನ ಹಾಸಿಗೆಯಲ್ಲಿ ಸ್ಥಲಮಾಡಿಕೊಂಡು ಎಲ್ಲಿಗೂ ಹೋಗದೆ ಅಲ್ಲೇ ಇರುತ್ತಿ ರಲಾಗಿ, ಡಿಂಡಿಮವೆಂಬ ಒಂದು ತಿಗಣೆ ಗಾಳಿಯಿಂದ ಹಾರಿಬಂದು ಆ ಹಾಸಿ ಗೆಯ ಮೇಲೆ ಬಿದ್ದಿತು. ಆಗ ಮಂದಪಿಸರ್ಪಿಣಿ ಅತಿಥಿಸತ್ಕಾರವನ್ನು ಮಾಡಿ ಹೋಗೆಂದಿತು. ನಿನ್ನ ನುಗ್ರಹದಿಂದ ನಾನಿಲ್ಲೇ ಇದ್ದು ನಿನ್ನನ್ನು ಬಂದು ಯಾಚಿಸಬೇಕೆಂದಿದ್ದೇನೆ. ನಿನಗೆ ನಮಸ್ಕರಿಸುತ್ತೇನೆ, ನಾನೆಂದೂ ಅನ್ಯರನ್ನು ಯಾಚಿಸಿದವನಲ್ಲ; ನನ್ನ ಕೋರಿಕೆಯನ್ನು ನೆರವೇರಿಸಬೇಕು. ನಿನ್ನ ಗುಣಗಳು ಬಹಳ ಪ್ರಸಿದ್ಧವಾಗಿ ಇವೆ. ನಿನ್ನಂಥವನು ಲೋಕ ದಲ್ಲೇ ಇಲ್ಲ-ಎಂದು ತಿಗಣೆ ನುಡಿಯಿತು, ಅದನ್ನು ಮಂದಪಿಸರ್ಪಿಣಿ ಕೇ-- ನೀನು ನನ್ನ ಇಷ್ಟು ಏಕೆ ಹೊಗಳುತ್ತೀಯೆ ? ನನ್ನ ಪುಣ್ಯ ವಶದಿಂದ ನೀನು ಇಲ್ಲಿಗೆ ಬಂದೆ, ನನ್ನ ವಂಶ ಧನ್ಯವಾಯಿತು. ನಾನು ನಿನ್ನ ಅನುಗ್ರಹದಿಂದ ಈ ರಾಜಶ್ರೇಪ್ಪನ ಹಾಸಿಗೆಯಲ್ಲಿ ಸುಖವಾಗಿ ಇದೇನೆ. ಈಗ ನೀನು ನನ್ನನ್ನೇನು ಕೇಳಬೇಕೆಂದು ಬಂದೆ? ನನ್ನ ಯೋಗ್ಯತೆಯನ್ನು ನೋಡಿ ನನ್ನನ್ನು ಯಾಚಿಸುಎನಲು, ಡಿಂಡಿಮ ವಿಂತೆಂದಿತು. ಯಾಚಕನಾದವನು ತನಗೆ ಬೇಕಾದವನ್ನು ಕೇಳುವನಲ್ಲದೆ ದಾತನ ವಿದ್ಯಮಾನವನ್ನು ನೋಡಿ ಕೇಳುವನೋ ? ಅರ್ಥಾಶೆಯಿಂದ ಮೊರೆಯಿಡುವನಲ್ಲದೆ ಇವ ಲೋಭಿ ಇವ ದಾತ ಎಂದು ಅರಿಯುವನೋ? ತನಗೆ ಇಲ್ಲದುದರಿಂದ ಇತರರನ್ನು ಶ್ರಮಪಡಿಸುತ್ತಾನೆಯೇ ಹೊರತು, ಇದು ಹೆಚ್ಚು. ಇದು ಸ್ವಲ್ಪ ಎಂದು ತಿಳಿದು ಯಾಚಿಸುತ್ತಾನೋ ? ಧನಾಪೇಕ್ಷೆಯಿಂದ ಸಭೆಗಳಲ್ಲಿ ಪ್ರಸಂಗಿಸಲಾರಂಭಿಸುತ್ತಾನೆಯಲ್ಲದೆ, ತನಗೆ ವಿದ್ಯೆ, ಸಾಲದೆಂದು ಹೇಳುವನೋ? ಹಣಗಾರರ ಹಿಂದೆ ತಿರುಗಿ ತನಗೆ ತಿಳಿದುದನ್ನೆಲ್ಲಾ ತೋರಿಸಿ ಅವರನ್ನು ಯಾಚಿಸಲಾಗಿ, ದಾತನಾದವನು