35 ಹ ಈ M ಮಿತ್ರಭೇದತಂತ್ರ ಮೆಚ್ಚಿ ಹಣವನ್ನು ಕೊಟ್ಟರೆ ಸಂತೋಷಿಸುವನು; ಲೋಭಿಯಾದವನು ಹಣವನ್ನು ಕೊಡದಿದ್ದರೆ ನೊಂದುಕೊಳ್ಳುವನು. ಇದು ಯಾಚಕನ ಸ್ವಭಾವವು. ನಾನೀಗ ಅರ್ಥಾಪೇಕ್ಷೆಯಿಂದ ನಿನ್ನನ್ನು ಕೇಳಬರಲಿಲ್ಲ; ನನಗೊಂದು ಸಹಾಯಮಾತ್ರ ಮಾಡಬೇಕು, ಅದೇನೆಂದರೆ : ಅನೇಕ ವೇಳ ನಾನು ಸಾಮಾನ್ಯ ಮನುಷ್ಯರ ರಕ್ತವನ್ನು ಪಾನಮಾಡಿರುವೆನಲ್ಲದೆ ಅರಸನ ದೇಹದ ರಕ್ತವನ್ನು ಎಂದೂ ಕುಡಿಯಲಿಲ್ಲ. ಇದನ್ನು ಮನಸ್ಸಿ ನಲ್ಲಿ ಇಟ್ಟುಕೊಂಡು ಇಂದು ನಾನು ನಿನ್ನ ಬಳಿಗೆ ಬಂದೆನು. ಇದಕ್ಕೆ ನೀನು ಸಮ್ಮತಿಸಿ ನನ್ನ ಕೋರಿಕೆಯನ್ನು ಈಡೇರಿಸಬೇಕು. ಇಂಥ ಕೋರಿಕೆ ಉಂಟಾಗಲಿಕ್ಕೆ ಕಾರಣವೇನೆಂದರೆ, ಹೇಳುತ್ತೇನೆ ಕೇಳು. ಸಣ್ಣಕ್ಕಿಯ ಅನ್ನ, ಆಗ ಬೆಣೆ ಕಾಸಿದ ಹಸುವಿನ ತುಪ್ಪ, ತೊಮ್ಮೆ, ಒಳ್ಳಯ ಮೇಲೋಗರ, ರುಚಿಯಾದ ಭಕ್ಷಗಳು, ಬಗೆಬಗೆಯ ಹಣ್ಣು ಗಳ, ಪಾನಕ, ಹಸುವಿನ ಹಾಲು, ಗಟ್ಟಿ ಮೊಸರು, ಸಕ್ಕರೆ, ಕಲ್ಲು ಸಕ್ಕರೆ, ಸಿಹಿನೀರು, ತಾಂಬೂಲ, ಪರಿಮಳವುಳ ಗಂಧ ಪುಷ್ಪಗಳು, ಮೊದಲಾದ ವಸ್ತುಗಳನ್ನು ದಿನದಿನವೂ ಅನುಭವಿಸುತ್ತಾ ಸುಖಿಸುತ್ತಿರುವ ಅರಸನ ದೇಹರಕ್ತವು ಬಹು ರುಚಿಯಾಗಿರುವುದೆಂದು ಕೇಳಿಯಿದೇನೆ. ಈವರೆಗೆ ಎಂದೂ ಅದು ನನಗೆ ಅನಿಸಲಿಲ್ಲ ಎಂದು ತಿಗಣೆ ಹೇಳಲಾಗಿ, ಕೇಳಿ ಮಂದವಿಸರ್ಪಿಣಿ ಹೇಳುತ್ತದೆ ;-ನಿನ್ನ ಹಲ್ಲುಗಳು ಬಹು ತೀಕ. ನಾಮವು; ನಿನಗೆ ಸಮಯ ತಿಳಿಯದು; ನಿನ್ನನ್ನು ಇಲ್ಲಿ ಸೇರಿಸಿಕೊರಿ ಡರೆ ನನಗೇ ಮೋಸ ಬಂದೀತು. ಈ ಅರಸನ ಹಾಸಿಗೆಯಲ್ಲಿ ಹಗಲೂ ಇರಳ ಉಪಾಯವಾಗಿ ಇರುವುದನ್ನು ಬಿಟ್ಟು ಹಾನಿಯಾಗಲಿಕ್ಕೆ ಯತ್ನಿ ಸುವೆನೇ ? ದುಘ್ನರು ಸಜ್ಜನರಿಗೆ ಅಪಕಾರವನ್ನೇ ಹುಡುಕುತ್ತಿರುವರು, ಅದು ಅವರ ನೈಜಗುಣ, ಆದುದರಿಂದ ನಿನ್ನ ಬಯಕೆಗೆ ನಾನು ಎಷ್ಟು ಮಾತ್ರವೂ ಸಮ್ಮತಿಸೆನು. ನಿನ್ನ ಮೇಲೆ ನನಗೆ ಕೋಪಬರುವುದುಎಂದಿತು. ಆ ಮಾತಿಗೆ ಡಿಂಡಿಮವು ದೈನದಿಂದ-ನೀನಿದ್ದ ಕಡೆಗೆ ನಾನು ಬಂದೆನು, ನಿನ್ನ ಚಿತ್ರಪ್ರಕಾರ ನಡಿಸಬಹುದು. ನಾನು ನಿನ್ನ ಕಾಲಿಗೆ ಬೀಳುವೆನು, ಅಟ್ಟಂತರವನ್ನು ಹೇಳದೆ ನಾನು ಕೇಳಿದ ಮಾತಿಗೆ ನೀನು ಸಮ್ಮತಿಸಬೇಕು-ಎನಲು, ಕಡೆಗೆ ಮಂದವಿಸರ್ಪಿಣಿ ದಾಕ್ಷಿಣ್ಯದಿಂದ
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೫
ಗೋಚರ