36 ಪಂಚತಂತ್ರ ಕಥೆಗಳು. ಸಮ್ಮತಿಸಿ ಆಡಿಂಡಿಮದೊಡನೆ, ನೀನು ಉಪಯವರಿತು ತರೆಪಡದೆ ಪರವಶವಾಗಿ ನಿದ್ರಿಸುತ್ತಿರುವ ರಾಜಶ್ರೇಷ್ಮನ ದೇಹವನ್ನು ಮೆಲ್ಲಗೆ ಕಚ್ಚಿ ರಕ್ತವನ್ನು ಹೀರಿ ಹೋಗಬೇಕು, ಬಹಳ ಎಚ್ಚರಿಕೆಯಿಂದಿರಬೇಕುಎಂದಿತು. ಬಳಿಕ ಡಿಂಡಿಮವು ಆ ಪ್ರಕಾರವೇ ಮಾಡುತ್ತೇನೆ ಎಂದು ಒಪ್ಪಿ, ಬಹಳ ಪ್ರೀತಿಯಾಗಿ ಅದರೊಡನೆ ಒಂದೇ ಹಾಸಿಗೆಯಲ್ಲಿದ್ದು , ಅದಕ್ಕೆ ತಿಳಿಯದ ಹಾಗೆ ಅರಸನ ಹತ್ತಿರಕ್ಕೆ ಹೋಗಿ ಮೊದಲಿನ ಜಾವ ದಲೇ ಕಚ ಲಿಕ್ರಾರಂಭಿಸಿತು. ಆಗ ಅರಸನು ಎಚ್ಚರಗೊಂಡು ಅದುರಿ ಬಿದ್ದು, ಕಾಲುಗಳನ್ನು ಹಿಸುಕುತ್ತಿದ್ದ ಊಳಿಗದವರನ್ನು ನೋಡಿ, - ನನ್ನ ಮೈ ಚೇಳುಕುಟುಕಿದ ಹಾಗೆ ಉರಿಯುತ್ತದೆ, ಹಾಸಿಗೆಯನ್ನು ಬೇಗ ನೋಡಿರಿ ಎಂದು ನುಡಿದನು. ಇಸ್ಮರಲ್ಲಿ ತಿಗಣೆ ಒಂದು ಸಂದಿನಲ್ಲಿ ಹೊಕ್ಕಿಕೊಂಡಿತು. ಅವರು ಹುಡುಕಿ ಅರಸನ ಹಾಸಿಗೆಯಲ್ಲಿದ್ದ ಕೂರೆ ಯನ್ನು ನೋಡಿ, ಇದೇ ಅರಸನ ದೇಹವನ್ನು ಕಚ್ಚಿ ತೆಂದು ಅದನ್ನು ಕೊಂದರು. ಆದಕಾರಣ ದುರ್ಜನರ ಸಹವಾಸವು ಹಾನಿಕರವಾಗುವುದು. ಎಂದು ಈ ರೀತಿಯಲ್ಲಿ ದಮನಕನು ಹೇಳಿದ ಕಥೆಯನ್ನು ಕೇಳಿ ಪಿಂಗಳಕನು-ನನ್ನ ಪರಾಕ್ರಮವನ್ನು ತಿಳಿದಿರಲಾಗಿ ಸಂಜೀವಕನು ಯಾವ ಸಾಧನಗಳಿಂದ ನನಗೆ ಹೇಗೆ ದೋಹವನ್ನು ಮಾಡಿಯಾನು ? ಎಂದು ಕೇಳಿದನು, ನೀನು ಮೈಮರೆತು ಇರುವಾಗ ಸಂಜೀವಕನು ನಿನ್ನನ್ನು ಕೊಂಬುಗಳಿಂದ ತಿವಿದು ಎತ್ತಿ ಹಾಕಿ, ಭಯಂಕರವಾದ ಗೊರಸುಗಳಲ್ಲಿ ತುಳಿದು, ಉದ್ದವಾದ ಬಾಲದಿಂದ ಬೀಸಿ ಹೊಡೆದು ಮನಸ್ಸು ಬಂದಂತೆ ಬಾಧಿಸುವನು-ಎಂದು ದಮನಕನು ಹೇಳಿದನು. ಆ ಮೇಲೆ ಪಿಂಗಳಕನು ಸ್ವಲ್ಪ ಹೊತ್ತು ಚಿಂತಾಕ್ರಾಂತನಾಗಿ ನೀನೀಗ ಸಂಜೀವಕನ ಬಳಿಗೆ ಹೋಗಿ ಅವನ ಅಭಿಪ್ರಾಯವನ್ನು ತಿಳಿದುಕೊಂಡು ಬೇಗ ಬಾ ಎಂದು ದಮನಕನನ್ನು ಕಳುಹಿಸಿದನು. ಬಳಿಕ ದಮನ ಕನು ಹೆದರಿದವನ ಹಾಗೆ ಅಲ್ಲಲ್ಲಿ ನಿಂತು ನಿಂತು ಸಂಜೀವಕನ ಹತ್ತಿರಕ್ಕೆ ಹೋಗಲು, ಅವನು-ಇದೇನು ? ಭಯದಿಂದ ನಡುಗುತ್ತಾ ಬಂದೆ, ನೀವೆಲ್ಲರೂ ಕ್ಷೇಮವೆ ? ಎಂದು ಕೇಳಲು, ದಮನಕನಿಂತಂದನು.
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೬
ಗೋಚರ