ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ? 80/ ಮಿತ್ರಭೇದತಂತ್ರ Dainanaka carries tales to Sanjivaka against Pingalaka, ಎಲೈ ವೃಷಭರಾಜನೇ, ಅರಸನನ್ನು ಸೇವಿಸುವವರಿಗೆ ಕ್ಷೇಮ ವೆಲ್ಲಿಯದು? ಸಂಪತ್ತಿಗಾಗಿ 'ಪರಾಧೀನರಾಗಲು, ಬದುಕಿ ಇರುವುದರಲ್ಲಿ ನಂಬಿಕೆಯಿಲ್ಲ ; ಚಿತ್ತಸ್ಯಾಸ್ಯ ವಿರಲೇಇರದು, ಧನವಿದ್ದರೆ ಗರ್ವಿ ಸದವನು ಯಾವನು? ಕಂಗತಿಯನ್ನು ಹೊಂದದವರು ಯಾರು ? ಯಾಚಕನಾದವನು ಯಾವನು ಗೌರವವನ್ನು ಹೊಂದಿದನು ? ದುರ್ಜ ನರ ಬಲೆಯಲ್ಲಿ ಸಿಕ್ಕಿದವನು ಯಾವನು ಕ್ಷೇಮವಾಗಿ ಹೋದನು ? ಅರ ಸನಿಗೆ ಪ್ರಿಯನಾದವನು ಯಾವನು ? ಮೂಢನಾದವನು-ಅರಸನು ತನ್ನನ್ನು ಇಸ್ಮರವನನ್ನಾಗಿ ಮಾಡಿದನು, ತನಗಿಷ್ಟು ಧನ ಕೂಡಿತ್ತು, ತನ್ನ ಮೇಲೆ ಅರಸನಿಗೆ ತುಂಬಾ ವಿಶ್ವಾಸವುಂಟು, ತಾನು ಬಹುಕಾಲ ಸುಖವಾಗಿ ಬಾಳಬಹುದು ಎಂದು ಮನಸ್ಸಿನಲ್ಲಿ ನೆನಸಿ ಸಂತೋಷಿಸು ತಿರುವನು; ವಿವೇಕಿಯಾದವನು ಇದನ್ನೆಲ್ಲಾ ಪ್ರಾಣಾಂತಕವೆಂದೆಣಿಸಿ ಹೆದರುತ್ತಿರುವನು. ಬುದ್ದಿಶಾಲಿಯಾದವನು ಕಾಲದೇಶಗಳನ್ನರಿತುತನಗೆ ಇವರು ಆಪ್ತರು ಇವರು ಅನಾರು-ಎಂದು ತಿಳಿದುಕೊಂಡು, ತನ್ನ ಶಕ್ತಿ ಇಂಥದು, ತನಗಿಂತ ಇವನಧಿಕನು, ಇವನಲ್ಪನು, ಎಂದು ವಿಚಾರಿಸಿ ಇತರರಿಗೆ ತಾನು ಒಳಪಡದೆ ಇರುವ ಉಪಾಯವನ್ನು ಯಾವಾ ಗಲೂ ಚಿಂತಿಸುತ್ತಿರುವನು-ಎಂದನು. ಅದಕ್ಕೆ ಸಂಜೀವಕನು ಅಲ್ಲಿಯ ರಾಜಕಾರದ ಸ್ವಭಾವವೇನು? ಈಗ ಅರಸನೇನು ಹೇಳಿದನು ? ಮಾಡಬೇಕಾದ ಕೆಲಸವೇನು ? ಎಂದು ಕೇಳಲಾಗಿ, ಹತ್ತಿರಕ್ಕೆ ಹೋಗಿ ಕುಳಿತುಕೊಂಡು ದಮನಕನು ಇಂತೆಂದನು ;--ಅರಸರ ವಿಶ್ವಾಸವನ್ನೂ ಅವಿಶ್ವಾಸವನ್ನೂ ಹೇಳತಕ್ಕುದಲ್ಲ. ಆದರೂ ನೀನು ನನ್ನಲ್ಲಿ ನಂಬಿಕೆ ಯಿಂದ ಬಂದಿದ್ದೀಯೆ. ಆದುದರಿಂದ ಇದ್ದ ಸಂಗತಿಯನ್ನು ತಿಳಿಸ ಬೇಕು, ಸ್ವಚ್ಛವಾಗಿರುವುದರಿಂದ ಸಮುದ್ರದಲ್ಲಿ ಮಣಿಗಳು ಮೇಲಕ್ಕೆ ಕಾಣಬಂದರೂ, ಸಮುದ್ರದ ಆಳ ಕೊಂಚವಾಗಿರುವುದೆಂದು ಎಣಿಸ ಕೂಡದು ; ಹಾಗೆಯೇ ಅರಸನು ನಮ್ಮಲ್ಲಿ ಬಹು ದಯೆಯುಳ್ಳವನಾಗಿ ದ್ದಾನೆಂದು ಅದನ್ನೇ ನಂಬಿರಕೂಡದು, ಸೇವಕರು ಅರಸನ ಹತ್ತಿರ