ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು | Gr ಸತತ ಕಾರ್ ಮಾಡುವ ಜೀವಂತ ಯಂತ್ರ, ಆದರೆ ಅವರ ಸಿಟ್ಟು, ತಲೆಗೇರಲು ತೀರ ಕುಲ್ಲಕ ಸಂಗತಿಯೂ ಸಾಕಾಗುತ್ತಿದ್ದಿತು ತಪ್ಪು ಎಂತಹ ಚಿಕ್ಕದೇ ಇರಲಿ, ಲಕ್ಷ್ಮಣರಾಯರ ಮುಂಗೋಪಕ್ಕೆ ತುತ್ತಾಗತಕ್ಕದ್ದೇ, ಆದುದರಿಂದ ಲಕ್ಷ್ಮಣರಾಯರೆಂದರೆ ಜನ ನಡುಗುತ್ತಿತ್ತು. ಹೀಗಿದ್ದರೂ ಲಕ್ಷ್ಮಣರಾಯರ ಕೈಯ್ಯಲ್ಲಿ ಜನ ಸಂತೋಷದಿಂದ ಹೇಗೆ ಕಾರ್ಯವನ್ನು ಮಾಡುತ್ತಿದ್ದರು ? ಅದಕ್ಕೆ ಉತ್ತರವಿಷ್ಟೇ- ಕೆಲಸದಲ್ಲಿ ಏನಾದರೂ ವ್ಯತ್ಯಾಸವಾದರೆ ಅವರಿಗೆ ಹೇಗೆ ಸಹನವಾಗುತ್ತಿದ್ದಿಲ್ಲವೋ ಹಾಗೆಯೇ ಯಾರಾದರೂ ಉತ್ಕೃಷ್ಟ ಕೆಲಸ ಮಾಡಿದರೆ, ಅದನ್ನು ಹೊಗಳಿ ಪ್ರೇಮದಿಂದ ಅವರ ಬೆನ್ನು ಚಪ್ಪರಿಸದೇ ಅವರು ಎಂದೂ ಬಿಡುತ್ತಿರಲಿಲ್ಲ. ಮತ್ತು ಅವರಿಗೆ ಯೋಗ್ಯ ಉತ್ತೇಜನವನ್ನು ಕೊಡುತ್ತಿದ್ದರು. ಅವರ ಶಬ್ದ ಗಳಲ್ಲಿ ನೋಹಕ ಶಕ್ತಿಯಿದ್ದಿತು. ಇದರಿಂದ ಕೆಲಸಗಾರರಲ್ಲಿ ನವಸ್ಫೂರ್ತಿಯು ಸ್ಪುರಿಸುತ್ತಿದ್ದಿತು. ಲಕ್ಷ್ಮಣರಾಯರು ಉಗ್ರಮೂರ್ತಿಯಿದ್ದಂತೆ ಅವರ ಪ್ರಸನ್ನತೆಯೂ ಅಷ್ಟೇ ಕಲ್ಯಾಣಕಾರಿ, ಆದುದರಿಂದ ಅವರ ಪ್ರಸನ್ನತೆಗಾಗಿ ಜನ ಅತುರವಾಗಿರುತ್ತಿದ್ದಿತು. ಇಂತಹ ಶೀಘ್ರಕೋಪಿಗಳಾದ ಲಕ್ಷಣರಾಯರೊಡನೆ ಭಾವೀ ನನ ವಧುವು ಸಂಸಾರವನ್ನು ಸಾಗಿಸಬೇಕಾಗಿದ್ದಿ ತು; ಮತ್ತು ಸಂಸಾರವು ಸುಖ ಮಯವೂ ಪ್ರೇಮಮಯವೂ ಆಗಬೇಕಾಗಿದ್ದರೆ, ಆ ಸಾಧಿಯು ಎಷ್ಟು ಜಪ್ಪಿಸಿಕೊಂಡು ನಡೆಯಬೇಕಾಗುತ್ತಿತ್ತೆಂಬ ಕಲ್ಪನೆಯು ಬರಲೆಂದೇ ಲಕ್ಷಣರಾಯರ ಸ್ವಭಾವ ಚಿತ್ರವನ್ನು ಮೇಲೆ ಚಿತ್ರಿಸಲಾಗಿದೆ. ಶಾಂತ, ಸಮಂಜಸ, ಕರ್ತವ್ಯದಕ್ಷ, ಪ್ರೇಮಮೂರ್ತಿಯಾದ ರಾಧಾಬಾಯಿಯವರಂತಹ ಧರ್ವಪತ್ನಿಯು ದೊರೆತುದುದು ಲಕ್ಷ್ಮಣರಾಯರ ಭಾಗ್ಯವೆಂದೇ ಹೇಳಬೇಕು. ಏಕೆಂದರೆ ಸೌ!! ರಾಧಾಬಾಯಿಯವರು ಪತಿಯ ಮನಃಸ್ವಾಸ್ಥ್ಯಕ್ಕೆ ಅವಶ್ಯ ವಾದ ಹಾಗೂ ಶಾಂತವಾದ ವಾತಾವರಣವನ್ನು ನಿರ್ಮಿಸಿದ ಮೂಲಕ ಲಕ್ಷಣರಾಯರು ತಮ್ಮ ಧೈಯಕ್ಕಾಗಿ ಹೋರಾಡಲು, ಬೇಕಾದಂಥ ಕಷ್ಟಗಳನ್ನು ಎದುರಿಸಲು ಸಮರ್ಥರಾದರು. ಲಕ್ಷ್ಮಣರಾಯರು ಸಂಪಾದಿಸಿದ ಕೀರ್ತಿಯ ಅರ್ಧಪಾಲು ಅವರ ಧರ್ಮಪತ್ನಿಗೆ ಸಲ್ಲದೆ ಹೇಗೆ ಬಿದ್ದೀತು? ೧೮೮೮ ರಲ್ಲಿ ಮುಂಬಯಿಯಿಂದ ಬೆಳಗಾವಿಗೆ ಬರಲು ಈಗಿನಂತೆ ಉಗಿಬಂಡಿಯ ಮಾರ್ಗವಿರಲಿಲ್ಲ. ಹಡಗಿನಲ್ಲಿ ಕುಳಿತು ವೆಂಗುರ್ಲೆಗೆ ಒಂದು ಅಲ್ಲಿಂದ