ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಮುಂಚಿನಬಳ್ಳಿ ಒಡೆಯನೊಡನೆಯೇ ವ್ಯವಹಾರವನ್ನು ಪ್ರಾರಂಭಿಸಿದರು. ಈ ಬಗೆಯಾಗಿ ೧೮೮೮ ರಲ್ಲಿ ಕಿರ್ಲೋಸ್ಕರ ಬಂಧುಗಳು ಎಂಬ ಹೆಸರು ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಪ್ರಥಮ ಪರಿಚಯವಾಯಿತು. ಲಕ್ಷಣರಾಯರ ಹಿರಿಯ ಅಣ್ಣಂದಿರು ಬೆಳಗಾವಿಯಲ್ಲಿ ಶಿಕ್ಷಕರಿದ್ದರಷ್ಟೇ? ಬೆಳಗಾವಿಯು ಯುರೋಪಿಯನ್ ಸೈನಿಕರ ಬೀಡು, ನಿಸರ್ಗ ರಮಣೀಯ ತಂಪು ಪ್ರದೇಶವೆಂದು ಅದರ ಪ್ರಸಿದ್ದಿ, ಸುಖವಸ್ತುಗಳ ಹಾಗೂ ಹೌಸು ಉಳ್ಳವರ ಸಂಖ್ಯೆಯು ಅಲ್ಲಿ ಹೆಚ್ಚು, ಸಾಯಕಲ್ ಮಾರಾಟಕ್ಕೆ ಇದು ಒಳ್ಳೆಯ ಸ್ಥಾನವೆಂದು ಇಬ್ಬರೂ ಬಂಧುಗಳು ನಿಶ್ಚಯಿಸಿ, ಸಾಯಕಲ್ಲಿನ ಅಂಗಡಿ ಯನ್ನು ಪ್ರಾರಂಭಿಸಿದರು.. ಈ ಅಂಗಡಿಯಲ್ಲಿ ಸಾಯಕಲ್‌ಗಳನ್ನು ಮಾರು ತಿದ್ದರಲ್ಲದೆ ಅವುಗಳನ್ನು ಸರಿಪಡಿಸಿಯೂ ಕೊಡುತ್ತಿದ್ದರು. ಅಲ್ಲದೆ ಸಾಯಕಲ್ಲು ಹತ್ತಲು ಕಲಿಸುವ ವರ್ಗವನ್ನೂ ಸುರುವು ಮಾಡಿದರು. ಕಲಿಸಲು ೧೫ ರೂ. ಫ್ರೀ ಇಟ್ಟಿದ್ದರು, ವಕೀಲರು, ಡಾಕ್ಟರರನ್ನು ಒಳಗೊಂಡು ಸಂಸ್ಥಾನಿ ಕರ ವರೆಗೂ ಸಾದಾ ಸೈನಿಕರಿಂದ ಮೊದಲುಮಾಡಿ ಬ್ರಿಗೇಡ ಜನರಲ್ಲರ ವರೆಗೂ ಸಾಯಕಲ್ ಹತ್ತಲು ಈ ವರ್ಗದಲ್ಲಿ ಕಲಿತು ಹೊರಬಿದ್ದರು. ಒಬ್ಬ ಬುದ್ದಿವಂತ ಹಾಗೂ ಕಲ್ಪಕ ಯಂತ್ರತಜ್ಞರೆಂದು ಲಕ್ಷ ರಾಯರ ಪರಿಚಯವು ಓರ್ವ ಸಂಸ್ಥಾನಿಕರೊಡನೆ ಆಯಿತು. ಈ ಪರಿಚಯದ ಉಪಯೋಗವು ಮುಂದಿನ ಉದ್ಯೋಗದಲ್ಲಿ ಬಹಳವಾಯಿತು. ರಾಯರ ಶಿಕ್ಷಣವು ಇಂಗ್ಲೀಷ ನಾಲ್ಕನೇ ಈಯತ್ತೆಯವರೆಗೆ ಮಾತ್ರ, ಆದರೆ ರಾಯರ ಈ ಇಂಗ್ಲಿಷ್‌ ಜ್ಞಾನವು ಇಂದಿನ ಮ್ಯಾಟ್ರಿಕ್ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ದ್ವಿತು, ಉದ್ಯೋಗದ ನಿಮಿತ್ತದಿಂದ ಬಿಳಿಯ ಗಿರಾಕಿಗಳ ಸಂಬಂಧ ಬಂದುದ ರಿಂದ ರಾಯರು ಸರಸವಾಗಿ ಇಂಗ್ಲಿಷಿನಲ್ಲಿ ಮಾತನಾಡಹತ್ತಿದರು. ನಾವು ಕೈಕೊಳ್ಳುವ ಉದ್ಯೋಗಕ್ಕೆ ಅವಶ್ಯವಿರುವ ಭಾಷೆಯ ಜ್ಞಾನವು ನಮಗಿರುವದು ಅವಶ್ಯವೆಂದು ಬೇರೆ ಹೇಳಬೇಕಾಗಿಲ್ಲ. ಕಾರಖಾನೆದಾರನಿಗೆ ತನ್ನ ಕ್ಷೇತ್ರದ ಯಾಂತ್ರಿಕ ಜ್ಞಾನವು ಪರಿಪೂರ್ಣವಿರುವದು, ಅವಶ್ಯವಿದ್ದಂತೆ, ಇಂಗ್ಲಿಷ್ ಭಾಷೆಯ ಜ್ಞಾನವೂ ಈ ಕಾಠ್ಯಕ್ಕೆ ಅವಶ್ಯ, ಇಲ್ಲದಿದ್ದರೆ ಈ ಕಾಠ್ಯದಲ್ಲಿ ಅದರ ಕೊರತೆಯು ಹೆಜ್ಜೆ ಹೆಜ್ಜೆಗೂ ಅನಿಸುತ್ತದೆ. ' ಲಕ್ಷ್ಮಣರಾಯರು ಗಿರಾಕಿಗಳೊಡನೆ : ಮಾತನಾಡುವದರಿಂದಲೇ ಪ್ರಾವೀಣ್ಯ ಪಡೆದರೆಂದು ಮಾತ್ರ ಯಾರೂ ತಿಳಿಯಕೂಡದು, “ಅಮೇರಿಕನ್