ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಬೆಳಗಾವಿಗೆ ಕಳಿಸಿದರು, ಅವರು ಹಣ ತೆಗೆದುಕೊಂಡು ಬಂದೊಡನೆ ಉತ್ಸಾಹ ದಿಂದ ಕೆಲಸ ಪ್ರಾರಂಭವಾಯಿತು. ಇಷ್ಟರಲ್ಲಿ ಬಂದಿತು ಆಷಾಢ ಏಕಾದಶಿ, ಕಾರಖಾನೆಯಲ್ಲಿ ಬಹುಜನ ವಿತ್ಥಲಭಕ್ತರು, ಅವರು ಪಂಢರಪುರಕ್ಕೆ ಹೊರಡಲು ಸಿದ್ಧರಾದರು, ಅವರನ್ನು ತಡೆದು ಅವರ ಮನನೋಯಿಸಲು ರಾಯರು ಬಯಸಲಿಲ್ಲ, ಅವರಿಗೆ ಹೋಗಲು ರಜೆಯಿತ್ತರು, ವಿಧ್ವಲ ಭಕ್ತರಿಗೆಲ್ಲ ಅನಕೂಲವಾಗುವಂತೆ, ಊರಲ್ಲಿಯೇ ನಿಶ್ಚಲಮಂದಿರ ಕಟ್ಟಿಸಿ, ತನ್ನ ಅಣ್ಣಂದಿರಾದ ಸೊಲ್ಲಾಪೂರದ ಡಾ, ವಾಸುದೇವರಾವ ದಂಪತಿಗಳಿಂದ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿಸಿ ದರು. ಈ ವಿತ್ಸಲ ಮಂದಿರದಲ್ಲಿ ಈಗಲೂ ಕಕ್ಕಡಾರತಿ, ಪುರಾಣ ಪ್ರವಚನ ಗಳು ನಡೆಯುತ್ತವೆ. ಮುಂದೆ ದೀಪಾವಳಿಯಲ್ಲಿ ರಂಟೆಗಳ ಹಂಗಾಮು ಬಂದಿತು, ಈ ಸಲ ಸುಗ್ಗಿಯೂ ಚನ್ನಾಗಿ ಆಗಿದ್ದರಿಂದ ರೈತರ ಕೈಯಲ್ಲಿ ಹಣ ಕುಣಿಯುತ್ತಿತ್ತು. ಅಂದಮೇಲೆ ರಂಟೆಗಳ ಬೇಡಿಕೆಗೆ ಕೊರತೆ ಎಲ್ಲಿಂದ ಬರಬೇಕು ? ಹಂಗಾಮಿ. ಗೆಂದು ಸಿದ್ದಪಡಿಸಿದ ರಂಟೆಗಳೆಲ್ಲ ಹಾ ಹಾ ಅನ್ನುವಷ್ಟರಲ್ಲಿ ಮಾರಾಟವಾದವು. - ಇಲ್ಲಿಯವರೆಗೆ ರಂಟೆಗಳ ಗಿರಾಕಿಗಳೆಂದರೆ ರೈತರು, ಆದರೆ ಪರಿಸ್ಥಿತಿಯು ಈಗ ಪಲ್ಲಟವಾಯಿತು, ನೇಗಿಲಗಳನ್ನು ಬಾಡಿಗೆಯಿಂದ ಕೊಡುವದು ಲಾಭದಾಯಕನೆಂದು ಬುದ್ಧಿವಂತರಾದ ವ್ಯಾಪಾರಿಗಳಿಗೆ ಹೊಳೆಯಿತು. ಬಾರ್ಸಿ, ಲಾತೂರ, ತಳೇಗಾನ, ಢಮಢೀರೆ, ಪರಭಣಿ, ಅಕೋಲಾ ಮೊದಲಾದ ಊರುಗಳಿಂದ ನೇಗಿಲಗಳನ್ನು ಹೆಚ್ಚು ಪ್ರಮಾಣದಿಂದ ಕೊಳ್ಳುವ ವ್ಯಾಪಾರಿಗಳು ಮುಂದೆ ಬಂದರು. ೬, ೧೦, ೪೦ ಹೀಗೆ ರಂಟೆಗಳನ್ನು ಕೊಳ್ಳಹತ್ತಿದ್ದರು. ಈ ರಂಟೆಗಳೊಡನೆಯೇ ಅದರ ಬಿಡಿಭಾಗಗಳ ಬೇಡಿಕೆಯೂ ಬೆಳೆಯಹತ್ತಿತು. ಹೀಗೆ ಉದ್ಯಮಕ್ಕೆ ಉತ್ತೇಜನ ದೊರೆತ ಮೇಲೆ ಸಾಹೇಬರ ಹಾಗೂ ಗಿಂಡೆ ಯವರ ಬಡ್ಡಿ ಸಹಿತ ಹಣ ಮುಟ್ಟಿಸುವದಕ್ಕೆ ಎಷ್ಟು ತಡ ! ಕಾರಖಾನೆಯ ಈ ಪ್ರಗತಿಯನ್ನು ಕಂಡು ರಾಜಾಸಾಹೇಬರು ಆನಂದಿತರಾಗಿ ನಾಡಿಗೆ ಬಂದು, ಪ್ರತಿಯೊಬ್ಬರ ಕೆಲಸವನ್ನು ನೋಡಿ ಪ್ರೇಮದಿಂದ ಅವರ ಬೆನ್ನ ಚಪ್ಪರಿಸಿದರು, ಈ ಸಂದರ್ಶನವು ಪ್ರತಿವರುಷದ ಕಾರ್ಯಕ್ರಮವಾಗಿ ಪರಿಣಮಿಸಿತು. . ಲಕ್ಷ್ಮಣರಾಯರಂಥ ಒಬ್ಬ ಕಲ್ಪಕ, ಕಲಾಕುಶಲಮನುಷ್ಯನು ತಮ್ಮ ಸಂಸ್ಥಾನದಲ್ಲಿ ಬಂದು ನೆಲೆಸಿದ್ದರಿಂದ ಸಂಸ್ಥಾನದಲ್ಲಿ ಅನೇಕ ಸುಧಾರಣೆಗಳನ್ನು