ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯyಜೋಗಿ ಕಿರ್ಲೋಸ್ಕರ ಲಕ್ಷಣರಾಯರು ೪೫ ಈಗ ಕಟ್ಟಿಗೆಯ ರಂಟೆಗಳು ಅಲ್ಲೊಂದು ಇಲ್ಲೊಂದು ಮಾತ್ರ ಕಣ್ಣಿಗೆ ಬೀಳುತಿವೆ. ಕಬ್ಬಿಣ ರಂಟೆಯ ಜನ್ಮದ ಮೊದಲು ಲಕ್ಷಾಂತರ ಎಕರೆ ಭೂಮಿಯು ಪಡಬಿದ್ದಿತು. ಇಂದು ಅದು ಸಾಗಾಗಿದೆ. ಕಬ್ಬಿಣರಂಟೆಯು ದೇಶದ ಧಾನ್ಯದ ಅಭಿವೃದ್ಧಿಗೆ ನೆರವಾಗಿದೆ. ಸುಧಾರಿಸಿದ ಸಾಧನವನ್ನು ಪ್ರಚಾರದಲ್ಲಿ ತಂದ ಯಂತ್ರ ಸಂಶೋಧಕರು ರಾಷ್ಟ್ರಕ್ಕೆ ಎಂತಹ ಅದ್ಭುತ ಸೇವೆ ಸಲ್ಲಿಸಬಹು ದೆಂಬುದಕ್ಕೆ ಈ ರಂಟೆಯ ಉದಾಹರಣೆಯೊಂದೇ ಸಾಕು, ಲಕ್ಷ್ಮಣರಾಯರು ಗಳಿಸಿದ ಈ ಅಪೂರ್ವ ವಿಜಯವು ರಾಷ್ಟ್ರಕ್ಕೆ ಉತ್ತೇಜನವನ್ನಿತ್ತಿದೆ. ಕವಿಗಳ ಕಾವ್ಯ ಸ್ಫೂರ್ತಿಯಾಗಿದೆ. ಈ ವಿಜಯದ ಬಗೆಗೆ ಒಂದು ಕಾವ್ಯವನ್ನೇ ಶ್ರೀ ಗುತ್ರೀಕರರು ರಚಿಸಿದ್ದಾರೆ.