ರ್U ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಕಬ್ಬಿಣ ರಂಟೆ ಹಾಗು ನಾಟಕಕ್ಕೆ ಎಷ್ಟು ಸಂಬಂಧವೋ ಅಷ್ಟೇ ರಂಟೆ ಗಳಿಗೂ ನಿಯತ ಕಾಲಿಕಗಳಿಗೂ ಸಂಬಂಧ, ಪಾಶ್ಚಾತ್ಯ ಕಾರಖಾನೆದಾರರು ತಮ್ಮ ಕೆಲಸಗಾರರಿಗಾಗಿ ವಸಹಾತು ಕಟ್ಟಿ ನಿಯತ ಕಾಲಿಕಗಳನ್ನು ನಡೆಸು ವರು ಎಂಬ ಮಾತು ಅವರ ತಲೆಯಲ್ಲಿ ಬಂದೊಡನೆ ಒಬ್ಬ ತರುಣನನ್ನು ಕರೆದು ಅವನ ಕೈಯಲ್ಲಿ ಫೋರ್ಡ ಕಂಪನಿಯಿಂದ ಹೊರಡುವ 'ಫೋರ್ಡ ಟಾಯಿನ್ನು' ಎಂಬ ಮಾಸಿಕದ ಪ್ರತಿಯನ್ನು ಕೊಟ್ಟು ಈ ಮಾದರಿಯ ಮೇಲೆ ಕಿರ್ಲೋಸ್ಕರ ವಾಡಿಯಿಂದ 'ಕಿರ್ಲೋಸ್ಕರ ಖಬರ' ಎಂಬ ಮಾಸಿಕವು ಹೊರಡಬೇಕೆಂದು ಹೇಳಿದರು. ಪಾಪ ! ಆತನಿಗೆ ಸಾಹಿತ್ಯದ ಗಂಧ ಕೂಡ ಇರಲಿಲ್ಲ. ರಾಯರ ಬೆಂಬಲವಿದ್ದ ಮೇಲೆ ಯಾರಿಗೆ ಉತ್ಸಾಹ ಬರಲಿಕ್ಕಿಲ್ಲ ! ೧೯೧೬ ನೆಯ ಸಪ್ಟಂಬರದಲ್ಲಿ (ಕಿರ್ಲೋಸ್ಕರ ಖಬರ' ಎಂಬ ಮಾದರಿಯ ಸಂಚಿಕೆಯು ಹೊರಬಿದ್ದಿತು, ಈ ಪ್ರಯೋಗದಿಂದ ಮಾಸಿಕ ಪುಸ್ತಕ ನಡೆಯಿಸಲು ಸ್ವಂತದ ಮುದ್ರಣಾಲಯವು ಅವಶ್ಯವೆಂದೂ ಅದರಿಂದ ಕಾರಖಾನೆಯ ಎಲ್ಲ ಮುದ್ರಣ ವನ್ನು ಮಾಡಿಕೊಳ್ಳಬಹುದೆಂದೂ ನಿಶ್ಚಯಿಸಿದರು. ೧೯೨೦ ನೆಯ ಜನವರಿ ಯಿಂದ 'ಖಬರ'ವು ಕಿರ್ಲೋಸ್ಕರವಾಡಿಯಿಂದಲೇ ಹೊರಬಿದ್ದಿತು. - ಮಹಾರಾಷ್ಟ್ರಕ್ಕೆ ಚಿರಪರಿಚಿತವಾಗಿರುವ 'ಕಿರ್ಲೋಸ್ಕರ' 'ಸ್ತ್ರೀ' 'ಮನೋ ಹರ'ಗಳ ಜನ್ಮವೃಂತವೂ ಹೀಗೆಯೇ ಇದೆ. ರಾಷ್ಟ್ರದ ಸಮಗ್ರ ದೃಷ್ಟಿಯುಳ್ಳ ಲಕ್ಷ್ಮಣರಾಯರಂಥ ಉದ್ಯೋಗಿಗಳಿದ್ದರೆ, ಅವರು ಆನುಷಂಗಿಕವಾಗಿ ಸಾಮಾಜಿಕ, ಸಾಂಸ್ಕೃತಿಕ-ಆಮೌಲ್ಯ ಸೇವೆ ಸಲ್ಲಿಸಲು ಹೇಗೆ ಶಕ್ಯವೆಂಬುದೇ ಇಲ್ಲಿ ವಿಚಾರಣೀಯ ಅಂಶ. ನಮ್ಮ ಹಳ್ಳಿಗಳ ಸುಧಾರಣೆಯ ಪ್ರಶ್ನೆಯು ಎಷ್ಟು ಮಹತ್ವದ್ದೆಂಬುದನ್ನು ಹೇಳಲಿಕ್ಕೇಬೇಡ, ಹಳ್ಳಿಗರ ಆರ್ಥಿಕ ಸ್ಥಿತಿ ಸುಧಾರಿಸಬೇಕು, ವಿಚಾರದ ಮಟ್ಟ ಎತ್ತರವಾಗಬೇಕು, ಅವರ ಜೀವನವು ಸುಖಿಯಾಗಬೇಕೆಂಬ ಪ್ರಯತ್ನಗಳು ಭರದಿಂದ ನಡೆದಿವೆ. ಹಳ್ಳಿಗಳ ನಡುವೆ ಒಂದು ಕಾರಖಾನೆಯಾದರೆ ಅವುಗಳ ಜೀವನದಲ್ಲಿ ಎಂತಹ ಪರಿವರ್ತನೆಯಾಗುವದೆಂಬುದನ್ನು ಕಿರ್ಲೋಸ್ತರವಾಡಿ ಯಿಂದಲೇ ತಿಳಿಯಬಹುದು, ಆದರೆ ರಾಯರ ಗ್ರಾಮ ಸೇವೆಯು ಅದ್ಭುತ ವಾಗಿದೆ. ಅದನ್ನು ಮುಂದೆ ವರ್ಣಿಸುವೆವು. ತಮ್ಮ ಕಾರ್ಯ ಸಾಧಿಸುವಾಗ ಅನಪೇಕ್ಷಿತವಾದ ಕೆಲವು ಹೊಣೆಗಾರಿಕೆ ಗಳು ಅವರ ಮೇಲೆ ಬರುತ್ತಿದ್ದವು.ಅವುಗಳನ್ನು ಅವರು ಈಡೇರಿಸಬೇಕಾಗುತ್ತಿ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೬
ಗೋಚರ