ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಮಿಂಚಿನಬಳ್ಳಿ ಲಾದ ಎಲ್ಲ ಧರ್ಮದವರೂ ಇದನ್ನು ತಮ್ಮ ತಮ್ಮ ಧರ್ಮ ಕಾರ್ಯಕ್ಕಾಗಿ ಉಪಯೋಗಿಸುತ್ತಿದ್ದರು. ಇದೇ ಅದರ ಅಪೂರ್ವತೆ, ಇಂದು ಶ್ರಾವಣಿಯಾದರೆ, ಇನ್ನೊಂದು ದಿನ ಕುತುಬಿ ನಡೆಯುತ್ತಿತ್ತು, ಮತ್ತೊಂದು ದಿನ ಇಬ್ರಾಹಿಂಪು ರದ ಪಾದ್ರಿಯಿಂದ ಬಾಯಬಲ್ ನಡೆಯುತ್ತಿತ್ತು. ಇಂತಹ ದೃಶ್ಯವು ಎಲ್ಲಿ ನೋಡಲು ಸಿಗುವದು ? ಈ ಎಲ್ಲದಕ್ಕೂ ಲಕ್ಷಣರಾಯರ ವಿಶಾಲ ಹೃದಯದ ಪ್ರೇರಣೆಯೇ ಕಾರಣ. ಆದುದರಿಂದಲೇ ಅಶಕ್ಯವೆನಿಸುವ ಎಷ್ಟೋ ಕಾರ್ಯ ಗಳು ನಡೆದವು. ರಾಷ್ಟ್ರದ ದೃಷ್ಟಿಯಿಂದ ಇವುಗಳ ಮಹತ್ವವು ಎಷ್ಟಿದೆ ಎಂಬು ದನ್ನು ಹೇಳಲಿಕ್ಕೇಬೇಡ. ಈ ಪ್ರಗತಿಪರ ದೃಷ್ಟಿಯು ರಾಯರಿಗೆ ಅಗರಕರ, ರಾನಡೆಯವರ ಬರಹಗಳಿಂದ ಬಂದುದಲ್ಲ. ಸ್ವತಃ ತಮ್ಮ ಸ್ಥಿತಿಯ ಸುಧಾರಣೆಗೆ, ಹಿರಿಯರ ಹಾದಿಯನ್ನೇ ಹಿಡಿಯಬೇಕೆಂಬ ಮಾತು ಉಪಯೋಗಬೀಳುವದಿಲ್ಲೆಂದೂ ಆದುದರಿಂದ ಪ್ರತಿಯೊಂದು ರಂಗದಲ್ಲಿ ಹೊಸ ಮಾರ್ಗ ಹಿಡಿಯಬೇಕೆಂದೂ ರಾಯರು ನಿಶ್ಚಯಕ್ಕೆ ಬಂದಿದ್ದರು. ಆದುದರಿಂದ ನಾಟಕದ ಹುಡುಗರನ್ನು ಕರೆದು “ನೀವು ಕೇವಲ ನಿಮ್ಮ ಇಚ್ಛೆ ಪೂರ್ಣ ಮಾಡಿಕೊಳ್ಳುವಿರಿ, ಪುರುಷರು ನಾಟಕವನ್ನಾಡಬೇಕು, ಸ್ತ್ರೀಯರು ಮಾತ್ರ ಆಡಬಾರದು, ಇದೆಲ್ಲಿಯ ನ್ಯಾಯ? ಮತ್ತು ಸ್ತ್ರೀ ಪಾತ್ರವನ್ನು ಗಂಡಸರು ಎಷ್ಟು ದಿನ ಮಾಡಬೇಕು ? ಆದುದರಿಂದ ಸಮಾಜ ಮಂದಿರದಲ್ಲಿ ಸ್ತ್ರೀಯರ ನಾಟಕಗಳೂ ನಡೆಯಲಿ ಎಂದು ಹೇಳಲ. ಕರೆಸಿದ್ದೆ” ಎಂದರು. - “ಕುಲೀನ ಸ್ತ್ರೀಯರು ರಂಗಭೂಮಿಯಲ್ಲಿ ಕೆಲಸ ಮಾಡಬೇಕೇ ?” ಎಂಬ ಚರ್ಚೆಯು ಆ ಕಾಲಕ್ಕೆ ಪ್ರಾರಂಭವಾಗಿತ್ತು. ಆದರೆ ಈ ಸುಧಾರಣೆಯನ್ನು ಕಿರ್ಲೋಸ್ಕರರು ಎಂದೋ ಜೀವನದಲ್ಲಿಳಿಸಿದ್ದರು, ಪುರುಷ ಪಾತ್ರಗಳಿಲ್ಲದ ನಾಟಕಗಳು ಮೋಘ, ತಾಮ್ಪಣಕರರಿಂದ ಬರಿಯಸಲ್ಪಟ್ಟವು, ಅವುಗಳಲ್ಲಿ • ಚತುರಶಾಂತಾ ” “ಮಾಯಿಚೀ ಮಾಯಾ' ಮೊದಲಾದ ತಾಮ್ಮಣಕರರ ನಾಟಕಗಳು ಪ್ರಕಾಶನವನ್ನು ಕಂಡವು, ಕೈ, ಸೌ|| ಆನಂದೀಬಾಯಿ ಕಿರ್ಲೊಸರರ 'ನವ್ಯಾ ವಾಟಾ' ಎಂಬ ನಾಟಕವೂ, 'ಉಸನಾ ನವರಾ' ಎಂಬ ತಾಮ್ಮಣಕರರ ನಾಟಕವೂ ಲೋಕಪ್ರಿಯವಾದವು ಕಿರ್ಲೋಸ್ಕರ ನಾಡಿಯಿಂದ ಕೇವಲ ರಂಟೆಗಳೇ ಹೊರಬೀಳದೆ ನಾಟಕಗಳೂ ಹೊರಬರಹತ್ತಿದವು. ಇದಕ್ಕೆ ಲಕ್ಷ್ಮಣರಾಯರ ಪ್ರೇರಣೆಯೇ ಕಾರಣ.