ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಸ್ಥಿತರಿದ್ದರು. ನಾಡಿಯಲ್ಲಿಯ ತರುಣರು ಫುಟ್‌ಬಾಲ ಆಡುತ್ತಿದ್ದರು. ಕ್ರಿಕೇಟ ಪ್ರಾರಂಭವಾಯಿತು, ಸ್ವಲ್ಪುದಿನಗಳಲ್ಲಿಯೇ ಔಂಧದ ಯುವರಾಜರ ಗುಂಪು, ಹಾಗು ವಾಡಿಯ ಗುಂಪುಗಳೊಡನೆ ಸ್ಪರ್ಧೆ ನಡೆಯಿತು, ಕೆಲವು ದಿನಗಳ ಲ್ಲಿಯೇ ವಾಡಿಯ ಗುಂಪು ಹೆಸರುವಾಸಿಯಾಯಿತು, ಇದನ್ನು ಕಂಡು ರಾಯರಿಗೆ ಬಲು ಹಿಗ್ಗು. ಈ ಮೊದಲಿನ ಆರೇಳು ವರ್ಷ ಉತ್ಸವಗಳಿಗೆ ಒಂದು ಸ್ವತಂತ್ರ ಕಟ್ಟ ಡವು ವಾಡಿಯಲ್ಲಿರಲಿಲ್ಲ. ವೆಲ್ಲಿಂಗ ಸೆಡ್ಡಿನಲ್ಲಿ ಕೆಲಸ ಸಾಗಿಸುತ್ತಿದ್ದರು. ತರುಣರಿಗೆ ವಿಶಾಲವಾದ ಒಂದು ಮಂದಿರವು ಅವಶ್ಯವೆನಿಸಿತು, ಆದರೆ ಅದನ್ನು ಸಾಧಿಸುವದೆಂತು ? ಹಣವೆಲ್ಲಿಂದ ತರಬೇಕು ? ಎಂಬ ಪ್ರಶ್ನೆ ಉದ್ಭವಿಸಿದಾಗ ಶಂಭುರಾವ, ಶಂಕರರಾವ, ಮೊದಲಾದವರು ಕೂಡಿ ವಿಚಾರ ಮಾಡಿ 'ಸಭಾ ಮಂದಿರವನ್ನು ನಾವೇ ಕಟ್ಟೋಣ, ಅದಕ್ಕೆ ಬೇಕಾಗುವ ಸಾಹಿತ್ಯವನ್ನು ಶಿಕ್ಷಣರಾಯರು ಒದಗಿಸಲಿ.” ಎಂದು ನಿಶ್ಚಯಿಸಿದರು, ಅದನ್ನು ರಾಯರಿಗೆ ತಿಳಿಸಿದರು. ರಾಯರು ಕೂಡಲೆ ಸಂತೋಷದಿಂದ ಒಪ್ಪಿಗೆ ಕೊಟ್ಟರು. ಊರ ಜನವೆಲ್ಲ ಉತ್ಸಾಹದಿಂದ ಕೆಲಸಕ್ಕೆ ಹತ್ತಿ, ೫-೬ ನೂರು ಜನರು ಕೂಡುವಂಥ ಸಭಾಮಂದಿರವನ್ನು ಮೂರು ವಾರಗಳಲ್ಲಿಯೇ ಕಟ್ಟಿದರು, ಇಂದಿನ ಶ್ರಮದಾನ ಇದೇ ಅಲ್ಲವೇ ! ಸಭಾಮಂದಿರದಲ್ಲಿಯ ರಂಗಭೂಮಿಯನ್ನು ಬಾಬೂರಾವ ಪೇಂಟರ ಹಾಗು ಫತ್ತೆ ಸಿಂಗರು ಸಜ್ಜುಗೊಳಿಸಿದರು. ಲಕ್ಷ್ಮಣರಾಯರ ಅಕ್ಕಂದಿರಾದ ಬಟುಅಕ್ಷಾರವರಿಂದ ಉದ್ಘಾಟನವಾಯಿತು, ಈ ಸಭಾಮಂದಿರವು ವಾಡಿಯ ಸಾಂಸ್ಕೃತಿಕ, ಹಾಗು ಸಾರ್ವಜನಿಕ ಜೀವನದ ಕೇಂದ್ರವಾಯಿತು. ಇಲ್ಲಿ ವಾಡಿಯ ನಾಟಕ, ಮನರಂಜನ ಕಾರ್ಯಕ್ರಮಗಳು ನಡೆಯುತ್ತಿದ್ದವಲ್ಲದೆ ರಾಹು ನಗರವಾಸಿ ಮೊದಲಾದ ನಾಟಕ ಸಂಪನಿಗಳೂ ಒಂದು ಆಡುತ್ತಿದ್ದವು. ಚಿತ್ರಪಟಗಳ ದರ್ಶನವೂ ನಡೆಯಹತ್ತಿತು. - ಈ ಮಂದಿರದಲ್ಲಿಯೇ ಗವರ್ನರರ ಸ್ವಾಗತ, ದೊಡ್ಡವರ ಅಭಿನಂದನೆಗಳು ನಡೆಯುತ್ತಿದ್ದವಲ್ಲದೆ, ಪ್ರಾ. ಫಡಿಕೆ, ಕರ್ವೆ, ವಾ, ಮ, ಜೋಸಿ ಮೊದಲಾದ ಮಹನೀಯರ ಭಾಷಣಗಳೂ ನಡೆಯುತ್ತಿದ್ದವು. ಅಲ್ಲದೆ ಮಂಗಲಕಾರ್ಯ, ರೋಗಿಗಳ ಶುಶೂಷೆಯ ಸ್ಥಾನ, ಹೀಗೆ ಅದು ಎಲ್ಲ ಸಾರ್ವಜನಿಕ ಜೀವನಕ್ಕೂ ಜೀವನವಾಗಿ ಪರಿಣಮಿಸಿತು. ಇದಲ್ಲದೆ ಹಿಂದೂ, ಮುಸ್ಲಿಮ್, ಕ್ರಿಸ್ತಿ ಮೊದ