೫೫ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಗಳ್ಳಿಯಲ್ಲಿ ಸೇರಿತು. ಎಷ್ಟೋದಿನಗಳಿಂದ ಬೀಳುಬಿದ್ದ ಇಂತಹ ಅಡವಿಯಲ್ಲಿ ಹಾವುಗಳಿಗೇನು ಕೊರತೆ ? ನಿಜವಾಗಿಯೂ ಅವುಗಳದೇ ಸಾಮ್ರಾಜ್ಯವದು. ಊರಿನ ಸುರಕ್ಷತೆಗಾಗಿ ಅವರು ಮುಂದೆ ಕೆಲದಿನ ಜನಮೇಜಯನಂತೆ ಸರ್ಪ ಯಾಗವನ್ನೇ ಕೈಕೊಳ್ಳಬೇಕಾಯಿತು. ಈ ಅಡವಿಯಲ್ಲಿ ರಾಯರಿಗೆ ಒಂದು ಬನ್ನಿಮರ ಕಂಡಿತು, ಅದರ ನೆರಳಲ್ಲಿ ಕುಳಿತು ಬುತ್ತಿ ತಿನ್ನುವಾಗ ಕಾರಖಾನೆಯನ್ನು ಯಾವದಿಕ್ಕಿನಲ್ಲಿ ಹಾಕಬೇಕು ? ಮನೆಗಳನ್ನು ಎಲ್ಲಿ ಕಟ್ಟಿಸಬೇಕು ? ಎಂಬುದನ್ನು ನಿಶ್ಚಯಿ ಸಿದರು. ಮರಳಿ ಸ್ಟೇಶನ್ನಿಗೆ ಬಂದು ಬೆಳಗಾವಿಯಿಂದ ಬಂದ ಬಂಬು, ತಟ್ಟಿ, ತಗಡುಗಳನ್ನು ಇಳಿಸುವ ಕೆಲಸದಲ್ಲಿ ತೊಡಗಿದರು, ಇಲ್ಲಿ ಹಮಾಲರು ಎಲ್ಲಿಂದ ಬರಬೇಕು ? ಕೆಲ ಚಾಸಿಗಳಿಂದ ಧರ್ಮಶಾಲೆಯ ಹತ್ತಿರ ಸಂಜೆಯ ಒಳಗಾಗಿ ಒಂದು ಗುಡಿಸಲನ್ನು ಕಟ್ಟಿದರು. ಇದೇ ಕಿರ್ಲೋಸ್ಕರವಾಡಿಯಲ್ಲಿಯ ಮೊದಲನೇ ಮನೆ. ಇಂತಹ ಗೊಂಡಾರಣ್ಯದಲ್ಲಿ ಬಂದು ಬಿಡಾರಮಾಡಲು ಸಾಮಾನ್ಯ ಜನರಿಗೆ ಧೈರ್ಯ ಉಂಟೆ ? ಆದರೆ ಲಕ್ಷ ಣರಾಯರು ತದ್ವಿರುದ್ದವಾಗಿ ಒಂದು ಸ್ವಪ್ನದಲ್ಲಿ ಇರುವಂತೆ ಕಂಡುಬಂದಿತು. ಇದಕ್ಕೆ ಕಾರಣಗಳಿಲ್ಲದಿರಲಿಲ್ಲ. ಇತ್ತೀಚೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಾರಖಾನೆದಾರರು ಕೂಲಿಕಾರರ ಸಲುವಾಗಿ ಹೊಸ ಹೊಸ ವಸಾಹತುಗಳನ್ನು ಸ್ಥಾಪಿಸುತ್ತಿರುವದನ್ನು ಮಾಸಿಕ ದಲ್ಲಿ ಓದಿದ್ದರು. ತಾವು ಹೊಸದಾಗಿಯೇ ಕಾರಖಾನೆಯನ್ನು ಸ್ಥಾಪಿಸುತ್ತಿರು ವಾಗ ಅವರ ಕಿತ್ತಿಯನ್ನೇ ತಾವೂ ಏಕೆ ತೀಡಬಾರದು ? ಎಂಬ ವಿಚಾರವು ಅವರನ್ನು ಕೆರಳಿಸಿತ್ತು. ಪೋಗ್ಯ ಸನ್‌ಲಾಯಿಟ ಮತ್ತು ಕ್ಯಾಡಬರೀ ಕಂಪನಿಗಳು ಸ್ಥಾಪಿಸಿದ ಬೋರ್ ವೀಲ್ ಔದ್ಯೋಗಿಕ ಪಟ್ಟಣದ ಎಲ್ಲ ಸಂಗತಿ ಗಳೂ ಅವರಿಗೆ ಗೊತ್ತಿದ್ದವು, ಅವರ ಮನಸ್ಸನ್ನು ವಿಶೇಷವಾಗಿ ಸೆಳೆದ ಚಿತ್ರವೆಂದರೆ ಅಮೇರಿಕೆಯಲ್ಲಿಯ ನ್ಯಾಶನಲ್ ಕ್ಯಾಶ ರಜಿಸ್ಟರ ಕಂಪನಿಯು ತನ್ನ ಕೆಲಸಗಾರರಿಗಾಗಿ ನಿರಿಸಿದ ವಸಹಾತು. ಈ ವಸಹಾತಿನಲ್ಲಿ ಕೆಲಸ ಗಾರರಿಗೆ ಗಾಳಿ ಬೆಳಕುಗಳುಳ್ಳ ಅಗ್ಗ ಮನೆ, ಮಕ್ಕಳಿಗೆ ಕಲಿಯಲು ಶಾಲೆ, ಆಡಲು ಬೈಲು, ದವಾಖಾನೆ, ಮನರಂಜನೆಗಳ ಮಂದಿರಗಳು, ಕೈದೋಟ ಮೊದಲಾದವುಗಳಿದ್ದವು. ಇಂತಹ ಸುಂದರವಾದ ಚಿತ್ರವು ಅವರ ಕಣ್ಣೆದುರಿಗೆ ಇದ್ದಿತು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೮೦
ಗೋಚರ