ಕರ್ನಾಟಕ ಗತವೈಭವ/೮ನೆಯ ಪ್ರಕರಣ
೮ನೆಯ ಪ್ರಕರಣ
ರಾಷ್ಟ್ರಕೂಟ ವಂಶಾವಳಿ |
||
ದಂತಿವರ್ಮ | ||
↓ | ||
ಕರ್ಕ | ||
↓ | ||
↓ | ↓ | |
ಇಂದ್ರ | ಕೃಷ್ಣ(೧ನೇ) | |
↓ | ಅಕಾಲವರ್ಷ,ಶುಭತುಂಗ | |
ದಂತಿದುರ್ಗ(೭೫೪) | ↓ | ↓ |
ಗೋವಿಂದ | ಧುವ,ನಿರುಪಮ | |
↓ | ↓ | |
ಗೋವಿಂದ, ಜಗತ್ತುಂಗ,ಪ್ರಭೂತವರ್ಷ | ಇಂದ್ರ | |
(೭೯೪-೮೧೪) | ಗುಜರಾಥದಲ್ಲಿ ಶಾಖೆಯನ್ನು ಸ್ಥಾಪಿಸಿದನು. | |
↓ | ||
ಸರ್ವ,ಅಮೋಘವರ್ಷ,ನೃಪತುಂಗ | ||
(೮೧೫-೮೭೭) | ||
↓ | ||
ಕೃಷ್ಣ (೨ನೇ), ಅಕಾಲವರ್ಷ | ||
(೮೮೪-೯೧೩) | ||
↓ | ||
ಇಂದ್ರ (೩ನೇ) | ||
(೯೧೫-೯೧೭) | ||
↓ | ||
ಅಮೋಘವರ್ಷ | ||
(೯೧೮-೯೩೩) | ||
↓ | ||
ಕೃಷ್ಣ (೩ನೇ), ಅಕಾಲವರ್ಷ | ||
(೯೩೩-೯೬೮) | ||
↓ | ||
ಇಂದ್ರ (೪ನೇ) | ||
೯೮೨ರಲ್ಲಿ ಮಡಿದನು |
- *ಈ ವಂಶಾವಳಿಯಲ್ಲಿ ಪ್ರಸಿದ್ಧ ಅರಸರ ಹೆಸರುಗಳನ್ನು ಮಾತ್ರ ಕೊಟ್ಟದ್ದೇವೆ. ೮ನೆಯ ಪ್ರಕರಣ – ರಾಷ್ಟ್ರಕೂಟರು೫೭
ರಾಷ್ಟ್ರಕೂಟರು*
(೭೫೭.೯೭೩)
- ಕಂ- ಶ್ರೀತಳ್ತುರದೊಳ್ಕೌಸ್ತುಭ | ಜಾತದ್ಯುತಿ ಬಳಸಿ ಕಾಂಡಪಟದಂತಿರೆ ಸಂ||
- ಪ್ರೀತಿಯಿನಾವನನಗಲ | ಳ್ನೀತಿ ನಿರಂತರನುದಾರನಾ ನೃಪತುಂಗ |
- ಕಂ- ಶ್ರೀತಳ್ತುರದೊಳ್ಕೌಸ್ತುಭ | ಜಾತದ್ಯುತಿ ಬಳಸಿ ಕಾಂಡಪಟದಂತಿರೆ ಸಂ||
-ಕವಿರಾಜ ಮಾರ್ಗ.
ಈ ರಾಷ್ಟ್ರಕೂಟವಂಶದ ಮೊದಲನೆಯ ಅರಸನೂ ಚಾಲುಕ್ಯರಂತೆ ಮೊದ ಲಿಗೆ ಉತ್ತರದಿಂದ ಬಂದವನು. ದಂತಿದುರ್ಗನೆಂಬವನು ಉತ್ತರದಿಂದ ಬಂದು ಬಾದಾಮಿಯ ಚಾಲುಕ್ಯರ ಕೊನೆಯ ಅರಸನಾದ ಕೀರ್ತಿವರ್ಮನೆಂಬವನನ್ನು ಸೋಲಿಸಿ, ಅವನ ರಾಜ್ಯವನ್ನು ಕಸುಕೊಂಡನು. ಅವನು ಕಂಚಿ, ಕಲಿಂಗ, ಕೋಸಲ, ಶ್ರೀಶೈಲ, ಮಾಳವ, ಲಾಟ, ಟಂಕ ಮುಂತಾದ ರಾಜ್ಯಗಳನ್ನು ಗೆದ್ದನೆಂತಲೂ, ಉಜ್ಜಯಿನಿಯಲ್ಲಿ ಸುವರ್ಣ-ರತ್ನ ಮುಂತಾದುವುಗಳನ್ನು ವಿಪುಲವಾಗಿ ದಾನಮಾಡಿದನಂತಲೂ ಉಲ್ಲೇಖವಿದೆ.
- *ಈ ವಂಶದ ಲೇಖಗಳು ಸುಮಾರು ೬೦-೭೦ ಮಾತ್ರವೇ ಪ್ರಸಿದ್ಧ ವಾಗಿವೆ. ಅವು ಸಾಮನಗಡ, ವಾಣಿ, ಕಾವಿ, ಕಾನ್ಹೇರಿ, ಸಾಂಗಲಿ, ಕರ್ಹಾಡ, ಹತ್ತಿಮತ್ತೂರ, ಪಟ್ಟದಕಲ್ಲು, ಲಕ್ಷೇಶ್ವರ, ಪೇರೂಳ, ಸವದತ್ತಿ, ಮು೦ತಾದ ಸ್ಥಳಗಳಲ್ಲಿ ದೊರೆತಿರುತ್ತವೆ. ೫೮ಕರ್ನಾಟಕ ಗತವೈಭವ
ದಂತಿದುರ್ಗನ ತರುವಾಯ, ಕೃಷ್ಣರಾಜ ಅಥವಾ ಶುಭತುಂಗನು (೭೬೦-೭೭೦) ಪಟ್ಟವನ್ನೇರಿ, ಚಾಲುಕ್ಯರನ್ನು ಪುನಃ ಸಂಪೂರ್ಣವಾಗಿ ಸೋಲಿಸಿ, ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ದೃಢವಾಗಿ ನಿಲ್ಲಿಸಿದನು. ಜಗತ್ತಿನೊಳಗಿನ ಪ್ರವಾಸಿಕರೆಲ್ಲರನ್ನು ಅತಿಶಯವಾಗಿ ಬೆರಗುಗೊಳಿಸುವಂಥ ವೇರೂಳಿನಲ್ಲಿಯ ಅತ್ಯದ್ಭುತವಾದ 'ಕೈಲಾಸ'ವೆಂಬ ಅಖಂಡವಾದ ಕಲ್ಲಿನ ಗುಡಿಯನ್ನು ಕೂರಿಸಿದವನು ಇದೇ ಕೃಷ್ಣರಾಜನು, (ವೈಭವವರ್ಣನೆಯ ೧೨ನೆಯ ಪ್ರಕರಣವನ್ನು ನೋಡಿರಿ).
ಇವನ ತರುವಾಯದಲ್ಲಿ ಧ್ರುವನು ಹೆಸರುವಾಸಿಯಾದ ಅರಸನು, ಇವನಿಗೆ 'ನಿರುಪಮ', 'ಕಲಿವಲ್ಲಭ' ಎಂದೂ ಹೆಸರುಗಳಿದ್ದುವು. ಇವನು ಪಲ್ಲವರನ್ನೂ ಗಂಗರನ್ನೂ ಗೆದ್ದು ಅವರಿಂದ ಕಪ್ಪವನ್ನು ತೆಗೆದುಕೊಂಡದ್ದಲ್ಲದೆ ಉತ್ತರದಲ್ಲಿ ಅಲ್ಲಾಬಾದದ ಹತ್ತರವಿರುವ ಕೌಸಾಂಬಿಯಲ್ಲಿ ಆಳುತ್ತಿದ್ದ ವತ್ಸ ಅರಸನ ಮೇಲೆ ದಂಡೆತ್ತಿ ಹೋಗಿ, ಅವನನ್ನು ಕಾಡಿಗೆ ಅಟ್ಟಿ ಅವನಿಂದ ರಾಜಛತ್ರಗಳನ್ನು ಕಸುಕೊಂಡನು.
ಈ ಗೋವಿಂದನ ಮಗನೇ ಕನ್ನಡಿಗರೆಲ್ಲರಿಗೂ ಪರಿಚಿತನಾದ ಅಮೋಘು ವರ್ಷ ಅಥವಾ ನೃಪತುಂಗನು; ಉಪಲಬ್ಧವಿರುವ ಕನ್ನಡ ಗ್ರಂಥಗಳಲ್ಲಿ ಎಲ್ಲಕ್ಕೂ ಹಳೆಯದಾದ 'ಕವಿರಾಜಮಾರ್ಗ' ಎಂಬ ಪ್ರಖ್ಯಾತಗ್ರಂಥದ ಕರ್ತನು ಈತನೇ. ಗುಣಭದ್ರನ ಗುರುವೂ ಆದಿಪುರಾಣವೆಂಬ ಜೈನಗ್ರಂಥದ ಕರ್ತನೂ ಆದ ಜಿನಸೇನನು ಈ ನೃಪತುಂಗನ ಗುರು. ಮುಂಬಯಿ ಹತ್ತರಿರುವ ಕಾನೇರಿಯ ಶಿಲಾ ಲಿಪಿಗಳಲ್ಲಿ, ಅಲ್ಲಿಯ ಶಿಲಾಹಾರರು ಈ ನೃಪತುಂಗನ ಮಾಂಡಲಿಕರಾಗಿದ್ದಂತೆ ಉಲ್ಲೇಖವಿದೆ. ಈ ಅಮೋಘವರ್ಷನು ಮಳಖೇಡದಲ್ಲಿ ಕರ್ನಾಟಕ ಸಿಂಹಾಸನದ ಮೇಲೆ ಒಟ್ಟಿಗೆ ೬೩ ವರ್ಷಗಳವರೆಗೆ ಕುಳಿತು ಅತ್ಯಂತ ವೈಭವದಿಂದ ರಾಜ್ಯ ನಾಳಿದನು. ಇಂಥವನನ್ನು ಕನ್ನಡಿಗರು ಮರೆಯುವುದು ಹೇಗೆ ?
ಆದರೆ ಚಾಲುಕ್ಯರ ವಂಶದಲ್ಲಿ ಅತ್ಯಂತ ಪ್ರಸಿದ್ದನಾದ ೨ನೆಯ ಪುಲಿಕೇಶಿಯ ತರುವಾಯದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ದೊಡ್ಡ ಅರಸರು ಆಗಿಹೋದಂತೆ ಈ ರಾಷ್ಟ್ರಕೂಟರಲ್ಲಿ ಆಗಲಿಲ್ಲ. ಅಮೋಘವರ್ಷನ ತರುವಾಯದಲ್ಲಿ ಪಟ್ಟವೇರಿದ ಒಬ್ಬಿಬ್ಬ ಅರಸರು ಶೂರರಾಗಿ ಹೋದರೂ ಅವರು ಬಹಳ ದಿವಸ ಆಳಲಿಲ್ಲ. ಮುಂದೆ ರಾಷ್ಟ್ರಕೂಟ ಅರಸರ ಹುಟ್ಟುಹಗೆಗಳಾದ ಚಾಲುಕ್ಯರು ಪ್ರಬಲರಾಗಿ, ಅವರಲ್ಲಿ ತೈಲಪನೆಂಬವನು ಈ ರಾಷ್ಟ್ರಕೂಟವಂಶದ ಅರಸನಾದ ಕರ್ಕನೆಂಬವನನ್ನು ಸಂಪೂರ್ಣವಾಗಿ ಸೋಲಿಸಿ, ರಾಜ್ಯವನ್ನು ಸೆಳೆದುಕೊಂಡು, ಪುನಃ ಚಾಲುಕ್ಯ ವಂಶವನ್ನು ಸ್ಥಾಪಿಸಿದನು (೯೭೨). ಈ ಮೇರೆಗೆ ನೃಪತುಂಗ ಅಥವಾ ಅಮೋಘವರ್ಷನ ತರುವಾಯ ಸುಮಾರು ನೂರು ವರ್ಷಗಳಲ್ಲಿಯೇ ಈ ವಂಶವು ಲಯ ಹೊಂದಿತು.