ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4, ಗುಣಪ್ರಕರಣ:-ಯಾವಯಾವುವು ಕಾವ್ಯಗಳ ಗುಣವನ್ನು ಹೆಚ್ಚಿಸುವುವು ? ಇತ್ಯಾದಿ ವಿಚಾರವು. 4, ಕವಿಸಮಯ;- ಕವಿಗಳು ಸಂಕೇತವಾಗಿ ವರ್ಣಿಸುವ ವಿಷ ಯಗಳು, V. ಶಬ್ದಾಲಂಕಾರ.- ಶಬ್ದಗಳಿಂದಲೇ ಕಾವ್ಯಕ್ಕೆ ಶೋಭಾ ವಿಶೇಷ ವನ್ನುಂಟುಮಾಡುವುದು. F, ವಿಶ್ರಾಲಂಕಾರ:-ಶಬ್ದ ಗಳಿಂದಲೂ ಆರ್ಥದಿಂದಲೂ ಕಾವ್ಯ ಕೈ ಶೋಭಾವಿಶೇಷವನ್ನುಂಟುಮಾಡುವುದು. ೧೦, ಅರ್ಥಾಲಂಕಾರ:- ಅರ್ಥಮಾತ್ರದಿಂದಲೇ ಕಾವ್ಯಕ ಶೋಭೆಯನ್ನುಂಟುಮಾಡುವುದು. ಈ ಹತ್ತು ಪ್ರಕರಣಗಳಲ್ಲಿ ಕೊನೆಯದಾದ ಅರ್ಥಾಲಂಕಾರವನ್ನೇ ಅಲಂಕಾರವೆಂದು ಸಾಮಾನ್ಯವಾಗಿ ಹೇಳಿ ಕೊಳ್ಳುವುದುಂಟು ; ಅದನ್ನೇ ಜನರು ತಿಳಿಯ ಯತ್ನಿಸುವುದು ಹೆಚ್ಚು ಇತರವಿಷಯಗಳು ಕೇವಲ ಗಹನ ವಾಗಿರುವುದರಿಂದ ಅವೆಲ್ಲ ಸಾಹಿತ್ಯಾಂತದಲ್ಲಿ ತಿಳಿಯತಕ್ಕುವಾಗಿರುವುವು. ಪ್ರಕೃತದಲ್ಲಿ ಈ ಅರ್ಥಾಲಂಕಾರ ಪ್ರಕರಣದ ಪಡಿಯೊಂದು ಅಲಂಕಾರ ಇ ಉದಾಹರಣೆಯಾಗುವಂತೆ ಒಂದೊಂದು ಪದ್ಯವನ್ನು ಬರೆದಿರುವುದು. ಆ ಆ ಅಲಂಕಾರದ ಲಕ್ಷಣವನ್ನೂ ಅದರ ಅಂತರ್ಭೇದವನ್ನೂ ತಿಳಿದು ಕೊಳ್ಳುವುದೂ ಪ್ರಯೋಜನಕಾರಿಯಾದುದರಿಂದ ಅದನ್ನು ತಿಳಿಯಲಪೇಕ್ಷೆ ಸುವರಿಗಾಗಿ ಈ ಶೇಪಸಂಗ್ರಹವು ಸಂಗ್ರಹಿಸಲ್ಪಟ್ಟು ಬರೆಯಲ್ಪಟ್ಟಿರುವುದು. ಇದರಲ್ಲಿ ಪ್ರಯೋಗಿಸಿರುವ ಅನೇಕ ಶಬ್ದಗಳು ಪಾರಿಭಾಷಿಕ ಶಬ್ದಗ ಳೆಂದು ತಿಳಿದು ಅವುಗಳಿಗೆ ಸರಿಯಾದ ಅರ್ಥವನ್ನು ಮಾಡಿಕೊಳ್ಳುವುದಕ್ಕೆ ಯತ್ನಿಸಬೇಕು, ಹೆಚ್ಚು ವಿಷಯಗಳನ್ನು ತಿಳಿಯಲಬೇಹಿಸುವರು ಇತರ ಗ್ರಂಥಗಳನ್ನು ನೋಡಬಹುದು. ೧, ಉಪಮ~ ಇದು ಅಲಂಕಾರಗಳಲ್ಲೆಲ್ಲಾ ಪ್ರಧಾನವಾ ದುದು, ಉಪಮೆಯೆಂದರೆ ಹೋಲಿಕೆ, ಇದರಲ್ಲಿ ಎರಡು ವಸ್ತುಗಳ ರುವುವು; ಒಂದು ಹೋಲಿಸಲ್ಪಡುವುದು; ಒಂದು ಹೋಲಿಸುವುದು; ಹೋಲಿ ಸಲ್ಪಡುವುದಕ್ಕೆ ಉಪಮೇಯವೆಂದು ಹೆಸರು; ಹೋಲಿಸುವದಕ್ಕೆ ಉಪ ಮಾನವೆಂದು ಹೆಸರು; ಈ ಎರಡು ವಸ್ತುಗಳೂ ಭಿನ್ನವಾಗಿರಬೇಕು,