ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾತ್ಮಕವಾಗಿದ್ದು ನಿದಿಧ್ಯಮಾನಕಾರಕ್ಕೆ ಉಪಯೋಗಿಯಾಗಿರುವುದೋ ಲ್ಲಿ ಪರಿಣಾವಾಲ ಕಾರವೆನಿಸುವುದು (ಉದಾ.-ಪದ್ಯ ೨೩) . ೭, ಉಲ್ಲೇಖೆ. (೧) ಎಲ್ಲಿ ನಾನಾವಿಧ ಧರ್ಮಗಳನ್ನು ಒಳಕೊಂಡ ಒಂದೇ ವಸ್ತು ಆ ಆ ಧರ್ಮಗಳ ಅಂಗೀಕಾರದಿಂದ ಅನೇಕ ಗ್ರಹೀತ್ರ ಗಳಿಂದ ಅನೇಕವಿಧವಾಗಿ ಉಲ್ಲೇಖಿಸಲ್ಪಡುವುದೋ ಅಲ್ಲಿ ಉಲ್ಲೇಖಾಲ೦ ಕಾರವಾಗುವುದು (ಉದಾ.-ಪದ್ಯ ೨೪.) (೨ ಗ್ರಹೀತೃಭೇದವಿಲ್ಲದಿ ದ್ದರೂ ಒಂದೇ ವಸ್ತುವೇ ವಿಸಯಭೇದದಿಂದ ಬಹುಪ್ರಕಾರವಾಗಿ ಉಲ್ಲೇ ಖಿಸಲ್ಪಡುವುದೋ ಅದೂ ಉಲ್ಲೇಖಾಲ೦ಕಾರವೆನಿಸುವುದು (ಉದಾ.ಪ೨೫) - ೮. ಸ್ಮತಿಮುತ್: - ಒಂದು ವಸ್ತುವನ್ನು ನೋಡುವುದರಿಂದ ತತ್ಸದೃಶವಾದ ಮತ್ತೊಂದುವಸ್ತು ಸ್ಮರಣೆಗೆ ಬರುವಂತೆ ವರ್ಣಿತವಾಗಿ ದ್ದರೆ ಸ್ಮೃತಿಮದಲಂಕಾರವೆನಿಸುವುದು (ಉ.-ಪದ್ಯ ೨೬ ) | ೯, ಭ್ರಾಂತಿಮತೆ':- ಮೇಲೆ ಹೇಳಿದ ಸರಣೆಯಸ್ಥಳದಲ್ಲಿ ಭ್ರಾಂತಿಯುಂಟಾದಂತೆ ವರ್ಣಿಸಲ್ಪಟ್ಟಿದ್ದರೆ ಭ್ರಾಂತಿಮದಲಂಕಾರವೆನಿಸು ವುದು (ಉದಾ-ಪದ್ಯ ೨೭ ) ೧೦, ಸಂದೇಹ:-ಹಾಗೆಯೇ ಸಂದೇಹವು ವರ್ಣಿತವಾಗಿದ್ದರೆ ಸಂದೇಹಾಲಂಕಾರವೆನಿಸುವುದು (ಉದಾ -ಪದ್ಯ ೨೮ ) | ೧೧, ಅಪಹೃತಿ:- ಅಪಹುತಿಯೆಂದರೆ ಮರೆಮಾಡುವುದೆಂದ ಸಾಮಾನ್ಯಾರ್ಥವು ಈ ಅಲಂಕಾರವು ಒಂಭತ್ತು ವಿಧವಾಗುವುದು, (೧) ಶುದ್ದಾ ಪಹ್ಮುತಿ- ಒಂದುವಸ್ತು ವರ್ಣನೀಯವಾಗಿರಲು ತತ್ಸದೃಶ ಧರ್ಮರೋಪ ಪ್ರಯೋಜನಕ್ಕಾಗಿ ಆ ವರ್ಣನೀಯ ವಸ್ತುವಿನ ಧರ್ಮವನ್ನು ಮರೆಮಾಡುವುದಾಗಲಿ, ಕವಿಬುದ್ಧಿ ವಿಕಾಸದಿಂದ ಉಕ್ಷೆ ತವಾದ ಧರ್ಮಾ೦ತರವನ್ನಾಗಲೀ ಮರೆಮಾಡುವುದು ಶುದ್ಧಾ ಸಹುತಿಯೆನಿ ಸುವುದು (ಉದಾ.-ಪಧ್ಯ ೨೯ ) | (೨) ಹೇತ್ವಪಹುತಿ:- ಅದೇ ಯುಕ್ತಿಪೂರ್ವಕವಾದರೆ ಹೇತ್ವಪ ಹುತಿಯೆನಿಸುವುದು (ಉದಾ. ಪದ್ಯ ೩0) | () ಪರಸ್ತಾಪಹುತಿ: - ಎಲ್ಲಿ ಒಂದುವಸ್ತುವಿನ ಧರ್ಮವನ್ನು ನಿಹವ (ಮರೆ) ಮಾಡಿ ಬೇರೊಂದು ವರ್ಣನೀಯವಾದ ವಸ್ತುವಿನಲ್ಲಿ