ಸತ್ಯ ವಚರಿತ್ರೆ ನಾರಾ-ಈ ಹಾಳ ಕೆಟ್ಟ ಜಗಳ ಏಕೆ ಬಂದಿತು ? ನಮ್ಮ ಮಗು ರಾಮಾ ನುಜಮ್ಮ ಮನೆಯಲ್ಲಿಲ್ಲವೋ ? ಸತ್ಯ-ಅವಳು ಅತ್ತು ಅತ್ತು ನೀವು ಬರುವುದಕ್ಕೆ ಒಂದು ನಿಮಿಷ ಮುಂಚೆ ಮಲಗಿಕೊಂಡಳು. ಅವಳೇ ಇದಕ್ಕೆ ಮೂಲ, ಈ ಹೊತ್ತು ಯಾರೋ ನಮ್ಮ ಮನೆಗೆ ಹಾಲುಣ್ಣುವ ಗಂಡುಮಗುವನ್ನೆತ್ತಿಕೊಂಡು ಬಂದಿದ್ದರಂತೆ. ಯಾವುದೋ ಮಾತಿನಮೇಲೆ ಮಾತು ಬಂದು-ನಿಮ್ಮೆಲ್ಲರಿಗೂ ಹಲಸಿನ ಹಣ್ಣಿನಂತೆ ಗಂಡು ಮಕ್ಕಳು ಹುಟ್ಟುತ್ತವೆ ; ನಮ್ಮ ನಿರ್ಭಾಗ್ಯ ಶಿರೋಮಣಿ ಏತಕ್ಕ ಕೆಲಸಕ್ಕೆ ಬಾರದ ಹೆಣ್ಣು ಮುಂಡೆಯನ್ನು ಹತ್ತಿಳು, ಹೆಣ್ಣು ಕಸ ಏಕೆ ? ನನ್ನ ಮಗನಿಗೆ ಇ೦ತಹ ಹೆಂಡತಿ ದೊರಕಿದುದು ಪ್ರಾರಬ್ಧ ಕರ್ಮದಿಂದಲೇ-ಎಂದು ಆಶ್ರಯವರೇನೋ ಆಡಿ ದರಂತೆ. ಅದರಿಂದ ನಮ್ಮಕ್ಕಯ್ಯನಿಗೆ ಉಳು ಕಿ-ಹೆಣ್ಣು ಮಗು ಹುಟ್ಟಿದರೆ ನಾನೇನು ಮಡತಕ್ಕುದು ? ಅದು ನಿಮ್ಮ ಮಗನ ತಪ್ಪಲ್ಲದೆ ನನ್ನ ತಪ್ಪೇನೂ ಅಲ್ಲ - ಎಂದು ಕೇಳಿದಳು, ಇಬ್ಬರಿಗೂ ಜಗಳ ಹತ್ತಿತು. ಹಿರಿಯರಾಡಿದರೆ ತಪ್ಪೇನು ? ಸುಮ್ಮನಿರು-ಎಂದರೆ ಅಕ್ಕನು ನನ್ನ ಮಾತನ್ನು ಕೇಳಲಿಲ್ಲ. ಅತ್ತೆಯವರು ನನ್ನನ್ನೆ ಷ್ಟು ಮಾತಾಡುವುದಿಲ್ಲ ? ಆಡಿದಮಾತಿಗೆಲ್ಲಾ ನಾನು ಇದಿರುಮಾತಾಡುತ್ತೇನೆಯೇ ? ನಾರಾ-ಅವರಿಬ್ಬರೂ ಹಾಗೆಯೇ ; ಒಬ್ಬರಿಗಾದರೂ ಸಹನೆಯಿಲ್ಲ. ನಮ್ಮಲ್ಲಿ ಹೆಂಗಸರು ಶುದ್ಧ ಮೂರ್ಖರು ; ನಿಷ್ಕಾರಣವಾಗಿ ಜಗಳವಾಡಿ ಉಪವಾಸ ಮಾಡಿ ಸಾಯುತ್ತಾರೆ, ಗಂಡಲ್ಲದೆ ಹೆಣ್ಣು ಹುಟ್ಟಿ ದರೆ ಹುಳಿತು ಹೋಗುವುದೋ ? ಉಪರ್ಯೋಗಕ್ಕೆ ಗಂಡಷ್ಟೋ ಹೆಣ ಅಷ್ಟೇ, ಇಬ್ಬರೂ ಕೂಡಿದ್ದರಲ್ಲದೆ ಎಂ ದಿಗೂ ಸುಖವಿಲ್ಲ. ಅಯ್ಯೋ ಪಾಪ ! ದಿನ ತುಂಬಿದ ಬಸುರಿ, ಒಹು ಕಾಲದವರೆಗೆ ಉಪವಾಸವಿದ್ದರೆ ಕಾಯಲೆ ಬರುವುದು, ನಾವು ಹೋಗಿ ಆಕೆಯನ್ನು ಊಟಕ್ಕೆ ಎಬ್ಬಿಸೋಣ, ಬಾ, (ಎಂದಿಬ್ಬರೂ ಸುಂದರಮ್ಮನ ಕಿರುಮನೆಗೆಹೋದರು.) - ಸತ್ಯ--(ತನ್ನೇರಗಿತ್ತಿಯ ಮುಖದಮೇಲಿದ್ದ ಮುಸುಕನ್ನು ತೆಗೆದು)- ಅಕ್ಕಯ್ಯಾ ! ನಿಮಗೋಸ್ಕರ ಯಾರೋ ಬಂದಿದ್ದಾರೆ, ನೋಡಿ. ಸುಂದರಮ್ಮ-(ಮೈದುನನ ಮುಖವನ್ನು ನೋಡಿ ಕಣ್ಣು ಮುಚ್ಚಿಕೊಂಡು ತಿರುಗಿ ಮುಸುಕುಹಾಕಿಕೊಂಡಳು) ನಾ-(ಪುನಃ ಮುಸುಕು ತೆಗೆದು, ಅತ್ತಿಗೆ ! ನನ್ನನ್ನು ಮರೆತುಹೋದೆಯಾ? ಎಷ್ಟೋ ದಿನಕ್ಕೆ ಇಲ್ಲಿಗೆ ಬಂದ ಮೈದುನನನ್ನು ಹೀಗೆಯೋ ಆದರಿಸುವುದು, ನನ್ನ ಕ್ಷೇಮಸಮಾಚಾರವನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ನಿನಗೆ ಮನಸ್ಸಿಲ್ಲವೋ ?
ಪುಟ:ಸತ್ಯವತೀ ಚರಿತ್ರೆ.djvu/೧೭
ಗೋಚರ